ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………….
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಅವರಿವರ ಮಾತಿಗೆ ಕಿವಿಗೊಡದೆ ಎಲ್ಲರು ಕರೋನ ಲಸಿಕೆ ಹಾಕಿಸಿಕೊಳ್ಳಿ ಎಂದು ಕಲ್ಯಾಣಾಶ್ರಮದ ಮಹಾಂತಸ್ವಾಮೀಜಿ ಹೇಳಿದರು.
ಪಟ್ಟಣದ ಪುರಸಭೆ ಕರೋನಾ ಲಸಿಕಾ ಕೇಂದ್ರದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಅವರು ಇದೊಂದು ವೈರಸ್ ಮಾನವ ಲೋಕಕ್ಕೆ ಅಂಟಿರುವ ರೋಗ, ವಿಚಿತ್ರ ಆಟದ ಮೂಲಕ ಜಗತ್ತಿನಲ್ಲಿ ತನ್ನ ಆರ್ಭಟ ತೋರಿದೆ. ಇದರಿಂದ ಪರಾಗಲು ಎಲ್ಲರು ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವಾಗಿದೆ. ಅದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಈ ಹಿಂದೆ ನಾವು , ಪೋಲಿಯೋ, ಸಿಡುಗು, ಅನೇಕಾಲು ರೋಗಕ್ಕೆ ಲಸಿಕೆ ತೆಗೆದುಕೊಂಡಿದ್ದೇವೆ ಅದರಂತೆಯೇ ಇದು ಕೂಡ ಈ ಬಗ್ಗೆ ಅಸಡ್ಯ ಭಾವನೆ ತೋರದೆ ಸರಕಾರ ಅಪರೂಪವಾದ ಅವಕಾಶ ಮಾಡಿಕೊಟ್ಟಿದೆ, ಆರೋಗ್ಯ ಇಲಾಖೆ, ಪುರಸಭೆ , ಪೊಲೀಸ್ ಇಲಾಖೆ,
ಸಿಬ್ಬಂದಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಸಾರ್ವಜನಿಕರ ಸೇವಾಗಾಗಿ ನಿಂತಿದ್ದಾರೆ ಅವರಿಗೆ ಎಲ್ಲರು ಗೌರವಿಸಿ, ಅವರಿಗೆ ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ಮುದಗಲ್ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ವಿನೋದ್ ಕುಮಾರ್,ಆರೋಗ್ಯ ನಿರೀಕ್ಷಾಣಾಅಧಿಕಾರಿ ಮಹೇಶ್ ಹೊಸಮನಿ , ಸಮುದಾಯದ ಆರೋಗ್ಯ ಅಧಿಕಾರಿ ಕಮಲ್ , ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ನವೀನ್,ಸುಮಲತಾ, ಪುರಸಭೆ ಸಿಬ್ಬಂದಿ ನಿಸಾರ್, ಬಸವರಾಜ್ ಇದ್ದರು.