Thursday , September 19 2024
Breaking News
Home / Breaking News / ತಾವರಗೇರಾ: ನಿವೃತ್ತಿ ಹೊಂದಿದ ಪ್ರಾಮಾಣಿಕ ವಾಟರ್ ಮನ್ ಶಿವಪ್ಪ..!

ತಾವರಗೇರಾ: ನಿವೃತ್ತಿ ಹೊಂದಿದ ಪ್ರಾಮಾಣಿಕ ವಾಟರ್ ಮನ್ ಶಿವಪ್ಪ..!

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಶಿವಪ್ಪ ಜುಮಲಾಪುರ ಇವರ ಸೇವೆಯಿಂದ ಸಾರ್ವಜನಿಕರು ವಂಚಿತರಾಗುತ್ತಿರುವುದು ಅನಿವಾರ್ಯ ವಾಗಿದೆ ಏಕೆಂದರೆ ಅವರ ಸೇವಾವಧಿಯಿಂದ ಸೋಮವಾರ ನಿವೃತ್ತಿ ಯಾಗಿರುವುದು ಪಪಂ ಸಿಬ್ಬಂದಿ ಯ ಜೊತೆಗೆ ಪಟ್ಟಣದ ಜನರು ಕೂಡ ವಾಟರ್ ಮನ್ ಶಿವಪ್ಪರವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಪ್ರಾಮಾಣಿಕತನಕ್ಕೆ ಮತ್ತೊಂದು ಹೆಸರೆಂದರೆ ಅದು ಶಿವಪ್ಪ ಜುಮಲಾಪೂರ ತಮ್ಮ ಕಾಯಕದ ಜೊತೆಗೆ ಪಟ್ಟಣದ ಜನರ ಜೀವನಾಡಿಯಂತೆ ಕೆಲಸ ಮಾಡಿದ ಶಿವಪ್ಪ ವಾರ್ಡುಗಳ ಎಲ್ಲಾ ಜನರ ಪ್ರಿತಿಗೆ ಪಾತ್ರರಾಗಿದ್ದರು, ಅವರ ಸೇವೆಯನ್ನು ಇಂದಿಗೂ ಕೂಡ ಯಾರು ಮರೆಯುವಂತಿಲ್ಲ ತಮ್ಮ ಅನುಪಸ್ಥಿತಿಯಲ್ಲಿ ಕೂಡ ವಾರ್ಡಿನ ಜನರಿಗೆ ನೀರಿನ ಪೂರೈಕೆಯಲ್ಲಿ ಅಡಚಣೆಯಾಗದಂತೆ ನೋಡಿಕೊಂಡವರು.

ಜೊತೆಗೆ ಪಟ್ಟಣದಲ್ಲಿ ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಆದರೆ ತಮ್ಮ ಉಳಿದ ಸಿಬ್ಬಂದಿಗೆ ಸಲಹೆ ನೀಡುತ್ತಿದ್ದ ಸೇವೆ ಹಾಗೂ ಅವರು ವೈಜನಾಥ ದೇವಸ್ಥಾನದ ಅಭಿವೃದ್ಧಿ ಯಲ್ಲಿ ಕೂಡ ಮುಂಚೂಣಿ ಯಲ್ಲಿದ್ದು ತಮ್ಮ ಸೇವೆಯ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಿದ್ದರು ಅವರ ನಿವೃತ್ತಿ ಯಿಂದಾಗಿ ಒಬ್ಬ ದಕ್ಷ ಕೆಲಸಗಾರರನ್ನು ಪಟ್ಟಣ ಪಂಚಾಯತ ಕಳೆದುಕೊಂಡಂತಾಗಿದೆ. ಅವರ ನಿವೃತ್ತಿ ಜೀವನವು ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಉದಯವಾಹಿನಿ ಬಳಗದ ವತಿಯಿಂದ ಶುಭ ಹಾರೈಕೆಗಳು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!