ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಕರೊನಾ ನಿಯಂತ್ರಣ ಕ್ಕಾಗಿ ಸಾರ್ವಜನಿಕರು ಕೂಡ ಸಹಕಾರ ನೀಡಿ, ಕಟ್ಟುನಿಟ್ಟಾಗಿ ಕೊವೀಡ್ ನಿಯಮಗಳನ್ನು ಪಾಲಿಸಬೇಕೆಂದು ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್ ಹೇಳಿದರು.
ಅವರು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಬಡವರಿಗೆ ಹಾಗೂ ನಿರ್ಗತಿಕರಿಗೆ ಹಾಗೂ ಕರೊನಾ ವಾರಿಯಸ್೯ಗಳಾದ ಪೌರ ಕಾರ್ಮಿಕರಿಗೆ, ಗೃಹರಕ್ಷಕ ದಳದವರಿಗೆ ಸೇರಿದಂತೆ ಇನ್ನಿತರರಿಗೆ ನೀಡಲಾದ ಉಚಿತ ಆಹಾರ ಕಿಟ್ ಗಳನ್ನು ವಿತರಿಸಿ ಮಾತನಾಡಿ,
18-45 ವಯಸ್ಸಿನವರಿಗೆ ಕೋವಿಡ್ ಲಸಿಕೆ ಪಡೆಯಲು ಪಟ್ಟಣ ಪಂಚಾಯತಿ ವತಿಯಿಂದ ದೃಡಿಕರಣ ಪತ್ರ ನೀಡಲಾಗುತ್ತಿದ್ದು ಸಾರ್ವಜನಿಕರು ಕಾರ್ಯಾಲಯ ಕ್ಕೆ ಬಂದು ದೃಡಿಕರಣ ಪಡೆದು ಕೊವೀಡ್ ಲಸಿಕೆ ಹಾಕಿಸಿಕೊಳ್ಳಬೇಕೆಂದು ಹೇಳಿದರು. ಶಾಸಕರು ಪಟ್ಟಣಕ್ಕೆ ಒಟ್ಟು 500 ಕಿಟ್ ಗಳನ್ನು ವಿತರಿಸಿದ್ದಾರೆ.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಶಂಕರ್ ಡಿ ಕಾಳೆ, ಉದ್ಯಮಿ ಬಸನಗೌಡ ಮಾಲಿಪಾಟೀಲ, ದುರುಗೇಶ ನಾರಿನಾಳ, ಅಮರೇಶ ಗಾಂಜಿ, ನಾಗರಾಜ ನಂದಾಪೂರ, ಎಮ್ ಡಿ ಬಾಬು, ದೇವರೆಡ್ಡಪ್ಪ ಸಿದ್ದಾಪೂರ ಹಾಗೂ ಇನ್ನಿತರರಿದ್ದರು.