ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ವ್ಯಾಪಾರಸ್ಥರ ಬಳಿ ಕೆಲ ಪತ್ರಕರ್ತರು ಮಾಮೂಲು ವಸೂಲಿಗೆ ಮುಂದಾಗಿದ್ದಾರೆಂದು ಮುದಗಲ್ ಪಟ್ಟಣದ ಕೆಲ ಪತ್ರಕರ್ತರು ತಪ್ಪಿಗಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದಲ್ಲಿ ಕೆಲವರು ಪತ್ರಕರ್ತರ ಸಂಘದ ಹೆಸರು ಬಳಸಿಕೊಂಡು ವ್ಯಾಪರಸ್ಥರ ಹತ್ತಿರ ಹಣ ವಸೂಲಿ ಮಾಡುತ್ತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ನಿಯಮ ಪಾಲಿಸದೆ ಅಂಗಡಿ ತೆರೆಯುತ್ತಿದ್ದು. ಇದು ಕಾನೂನು ಬಾಹಿರವಾಗಿದೆ
ನೀವು ಅಂಗಡಿಗಳನ್ನು ತೆರೆಯಬೇಕಾದರೆ ನಮಗೆ ಮಾಮೂಲು ನೀಡಿದರೆ ಮಾತ್ರ ನಾವು ಸುಮ್ಮನೆ ಇರುತ್ತವೆ.ಯಾವುದೇ ಸುದ್ದಿ ಬರೆಯುವುದಿಲ್ಲ ಎಂದು ಹಣ ಕೆಳುತ್ತಿರುವುದು ಕೆಲ ಕಡೆ ಬೆಳಕಿಗೆ ಬರುತ್ತಿದೆ. ಹಣ ವಸೂಲಿ ಮಾವುಡುತ್ತಿರುವ ಪತ್ರಕರ್ತರ ವಿರುದ್ಧ ತನಿಖೆ ನಡೆಸಿ ತಪ್ಪಿಗಸ್ಥರ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಿದರು. ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಜಮಾದಾರ್ ಅಂಜಿನಯ್ಯ ಪತ್ತಾರ್ ರವರು ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭ ಶಶಿಧರ ಕಂಚಿಮಠ, ಡಾ. ಶರಣಪ್ಪ ಆನೆಹೊಸೂರು, ದೇವಣ್ಣ ಕೋಡಿಹಾಳ, ಹನುಮಂತ ನಾಯಕ, ನಾಗರಾಜ್ ಎಸ್ ಮಡಿವಾಳರ, ಬಸವರಾಜ್ ಹುನೂರು, ಅಮರೇಶ್ ಮಡಿವಾಳರ, ಸುರೇಶ್ ಪತ್ತಾರ, ಮಂಜುನಾಥ್ ಕುಂಬಾರ, ಸೈಯದ್ ಮೈಬೂಬ ಇದ್ದರು.