ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಕರೋನಾ ಎರಡನೇ ಅಲೆಯಿಂದ ಪ್ರತಿದಿನ ಹೊಸ ಕರೋನಾ ಪ್ರಕರಣಗಳು ಹೊರಬರುತ್ತಿವೆ. ಆಮ್ಲಜನಕದ ಕೊರತೆಯಿರುವುದೂ ಹಲವರ ಸಾವಿಗೆ ಕಾರಣವಾಗಿದೆ ಇದನ್ನು ತಪ್ಪಿಸಲು
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 200ರೂಪಾಯಿಗಳಿಗೆ ಆಮ್ಲಜನಕ ಯಂತ್ರ ಬಾಡಿಗೆಗೆ ದೊರೆಯುತ್ತದೆ ಹೌದು ಭಾರತೀಯ ಜೈನ ಸಮುದಾಯದಿಂದ ಆಮ್ಲಜನಕ ಯಂತ್ರ ವಿತರಣೆ ಮಾಡಲಾಗಿದ್ದು ಇದು ಪಟ್ಟಣದಲ್ಲಿರುವ ಸೊಂಕೀತರು ಹೋಮ್ ಐಸೋಲೋಷನ್‌ನಲ್ಲಿ ಇರುವವರಿಗೆ ಆಕ್ಸಿಜನ್ ಅವಶ್ಯಕತೆಯಿದ್ದರೆ ಇದರ ಸದುಪಯೋಗ ಪಡೆದುಕೊಳ್ಳಬಹುದು ಈ ಯಂತ್ರಕ್ಕೆ ಮೊದಲು ಐದು ಸಾವಿರ ರೂಪಾಯಿ ಠೇವಣಿ ಇರಿಸಿಕೊಳ್ಳಲಾಗುತ್ತಾರೆ, ಒಂದು ದಿನಕ್ಕೆ 200 ರೂಪಾಯಿ ಬಾಡಿಗೆ ಯಂತೆ ನಿಮಗೆ ಯಂತ್ರ ದೊರೆಯಲಿದೆ, ಯಂತ್ರವನ್ನ ಮರಳಿಸಿದಾಗ 5,000 ರೂ. ಮುಂಗಡ ಠೇವಣಿ ಮರುಪಾವತಿ ಮಾಡುತ್ತಾರೆ ಅವಶ್ಯಕತೆ ಉಳ್ಳವರು ಮುದಗಲ್ ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಯಂತ್ರ ಪಡೆದುಕೊಳ್ಳಬಹುದಾಗಿದೆ.