ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಸಮೀಪದ ಸುಕ್ಷೇತ್ರ ಅಂಕಲಿಮಠದ ಜಾತ್ರೆ ರದ್ದು ಪಡಿಸಲಾಗಿದೆ ಎಂದು ಮಠದ ಪೂಜ್ಯ ಶ್ರೀ ವೀರಭದ್ರ ಮಹಾ ಸ್ವಾಮಿಗಳು ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀ ಗಳು ಕರೋನ ವೈರಸ್ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದೂ ಶ್ರೀ ಮಠದ ಜಾತ್ರೆಗೆ ಲಕ್ಷಾಂತರ ಭಕ್ತರು ಬರುವುದರಿಂದ ಭಕ್ತರ ಹಿತ ದೃಷ್ಟಿಯಿಂದ ಕರೋನ ವೈರಸ್ ಹರಡುವಿಕೆ ತಪ್ಪಿಸಲು ಇದೆ ಜೂನ್ 2 ರಂದು ನಡೆಯಬೇಕಾಗಿದ್ದ ಶ್ರೀ ಸದ್ಗುರು ನಿರುಪಾಧೀಶ್ವರ ಮಹಾ ರಥೋತ್ಸವ ವನ್ನು ರದ್ದುಪಡಿಸಿ ಜೂನ್ 1 ಮತ್ತು2 ರಂದು ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ಸರಳವಾಗಿ ನಡೆಯಲಿದೆ. ಶ್ರೀ ಮಠದ ಭಕ್ತರು ತಮ್ಮ ತಮ್ಮ ಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಸದ್ಗರುವಿನ ಆಶೀರ್ವಾದ ಪಡೆದುಕೊಳ್ಳಬೇಕು, ಎಲ್ಲರೂ ಸಾಮಾಜಿಕ ಅಂತರ ಕಾಯ್ದು ಕೊಂಡು ಮಾಸ್ಕ್ ಧರಿಸಿ,ಹಾಗೂ ಸರಕಾರದ ನಿಯಮ ಪ್ರಕಾರ ಅರ್ಹತೆ ಉಳ್ಳವರು ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಿ ತಾವೆಲ್ಲರೂ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರು ಪಾಲಿಸಿ ಕರೋನ ಮುಕ್ತವಾಗಿಸೋಣ ಎಂದರು.