ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಆಕಸ್ಮಿಕವಾಗಿ ಸಣ್ಣವನಿದ್ದಾಗ ಮನೆ ಬಿಟ್ಟು ತೆರಳಿದ್ದ ಯುವಕನೊಬ್ಬ ಕರೊನಾ ದಿಂದಾಗಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ, 14 ವರ್ಷದ ನಂತರ ಮರಳಿ ತಮ್ಮ ಸ್ವ ಗ್ರಾಮವಾದ ಸಮೀಪದ ಜುಮಲಾಪೂರದಲ್ಲಿ ತಮ್ಮ ತಂದೆ ತಾಯಿ ಮಡಿಲು ಸೇರಿದ ಘಟನೆ ನಡೆದಿದೆ.
ಜೂಮಲಾಪುರ ಗ್ರಾಮದ ಗುರುಬಸಪ್ಪ ಹಾಗೂ ಪಾರ್ವತಮ್ಮ ಎಂಬುವವರ ಮಗ ದೇವರಾಜ ಎಂಬಾತನೆ ಈಗ ಮರಳಿ ಮನೆಗೆ ಬಂದಿರುವ ಯುವಕ. ಈ ಹಿಂದೆ ತಂದೆ ಜೊತೆ ವಾಗ್ವಾದ ಮಾಡಿಕೊಂಡು ಊರು ಬಿಟ್ಟು ತೆರಳಿದ ಮೇಲೆ, ಆತನನ್ನು ಹುಡುಕಲು ಮನೆಯವರು ಎಷ್ಟೆ ಪ್ರಯತ್ನ ಪಟ್ಟರು ಕೂಡ ಸಿಗದಿದ್ದಾಗ, ಆತನನ್ನು ಮರೆತು ಹೋಗಿದ್ದರು ಈಗ 14 ವರ್ಷದ ಬಳಿಕ ಮಗ ಮನೆಗೆ ಬಂದಾಗ ಆಶ್ಚರ್ಯದ ಜೊತೆಗೆ ಸಂತೋಷ ವ್ಯಕ್ತಪಡಿಸಿದಾಗ ಯುವಕನು ಭಾವುಕ ನಾದ ಘಟನೆ ನಡೆದಿದೆ.
ದೇವರ ಆಟ ಬಲ್ಲವರು ಯಾರು ಎಂಬಂತೆ ಬರೊಬ್ಬರಿ 14 ವರ್ಷಗಳ ಕಾಲ ಮಗನನ್ನು ಮರೆತಿದ್ದ ತಂದೆ ತಾಯಿಯರಿಗೆ ತಮ್ಮ ಮಗ ಮನೆ ಸೇರಿರುವುದು ಒಂದೆಡೆ ಆದರೆ 14 ವರ್ಷಗಳಿಂದ ಕುಟುಂಬ ಸದಸ್ಯರನ್ನು ಬಿಟ್ಟುಹೊಗಿದ್ದ ದೇವರಾಜನಿಗೆ ಮರಳಿ ಮನೆ ಸೇರಿರುವುದು ಖುಷಿ ತಂದಿದೆ.