Thursday , September 19 2024
Breaking News
Home / Breaking News / ಮುದಗಲ್ ಪಟ್ಟಣವನ್ನ ಕರೋನ ಮುಕ್ತವಾಗಿಸೋಣ : ಡಾ. ಅನಂತ ಕುಮಾರ್ 

ಮುದಗಲ್ ಪಟ್ಟಣವನ್ನ ಕರೋನ ಮುಕ್ತವಾಗಿಸೋಣ : ಡಾ. ಅನಂತ ಕುಮಾರ್ 

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ : ನಾಗರಾಜ್ ಎಸ್ ಮಡಿವಾಳರ್ 

ಮುದಗಲ್ :  ಕೊರೊನಾದಿಂದಾಗಿ ಪಟ್ಟಣದ ಕೆಲ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿದ ದಿನ ಪತ್ರಿಕೆ ವಿತರಕರಿಗೆ ಹಾಗೂ ಬಡ ಕುಟುಂಬಗಳಿಗೆ  ದಿನಸಿ ಪದಾರ್ಥಗಳ ಕಿಟ್ ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುದಗಲ್ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಧಿಕಾರಿ ಡಾ.ಅನಂತ್ ಕುಮಾರ ಮಾತನಾಡಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಲಾಕ್‍ಡೌನ್ ಜಾರಿಗೆ ತಂದಿರುವುದರಿಂದ ದಿನಗೂಲಿ  ದುಡಿದು ಜೀವನ ನಡೆಸುವವರಿಗೆ, ಸಣ್ಣಪುಟ್ಟ ವ್ಯಾಪಾರ ಮಾಡುವ ಸಂಚಾರಿ ವ್ಯಾಪಾರಿಗಳಿಗೆ,ಕಡು ಬಡವರಿಗೆ ಜೀವನ ನಡೆಸುವುದೇ  ಕಷ್ಟವಾಗಿರವ ಸಮಯದಲ್ಲಿ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಸಂಸ್ಥೆ ದಿನಸಿ ಕಿಟ್‍ಗಳನ್ನು ವಿತರಿಸುವ ಮೂಲಕ ಅವರ  ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯವಾದದ್ದು. ಜನರು ಕರೋನ ಮುನ್ನೆಚ್ಚರಿಕೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಸಾಮಾಜಿಕ ಅಂತರ  ಮಾಸ್ಕ್, ಸಾನಿಟೇಜರ್ ಬಳಸಿ
ಪಟ್ಟಣದಲ್ಲಿ  ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು  ಸಹಕರಿಸಿ.ಮಳೆಗಾಲ ಆರಂಭವಾಗಿರುವುದರಿಂದ ಶೀತ ಜ್ವರ, ನೆಗಡಿ, ಕೆಮ್ಮು ಬರುವುದು ಸಾಮಾನ್ಯವಾಗಿದ್ದು ಇದರಿಂದ  ಜನರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ಕೊರೊನಾ ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆ ಇರಲಿ ಅನಾರೋಗ್ಯ ಉಂಟಾದರೆ ಅಥವಾ ಕರೋನ  ರೋಗ ಲಕ್ಷಣ ಕಂಡುಬಂದರೆ ಕೂಡಲೇ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ನಾವೆಲ್ಲ ಸೇರಿ  ಮುದಗಲ್ ಪಟ್ಟಣವನ್ನ ಕರೋನ ಮುಕ್ತವಾಗಿಸೋಣ ಎಂದರು ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ಮೇಲ್ವಿಚಾರಕರಾದ ನಿಂಗನಗೌಡ ಪಾಟೀಲ್. ರಾಧಾ ಜಿ ನಗದು ಸಹಾಯಕರು ಬಸವರಾಜಗೌಡ ಮಂಜುನಾಥ್ ಶರಣಬಸವ ಸೇವಾಪ್ರತಿನಿಧಿಗಳು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!