ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಜಿಲ್ಲಾಧಿಕಾರಿಗಾಳ ಆದೇಶದ ಮೇರೆಗೆ ಕರೊನಾ ಪಾಸಿಟಿವ್ ಸೊಂಕಿತರು ಕೊವೀಡ್ ಕೇರ್ ಸೆಂಟರ್ ಗೆ ಹೋಗದೆ ಹೋಂ ಐಸಲೊಷನ್ ನಲ್ಲಿರುವವರ ಮನೆಗಳನ್ನು ಸೀಲ್ ಡೌನ್ ಮಾಡಲಾಗುವದೆಂದು ಪಪಂ ಮುಖ್ಯಾಧಿಕಾರಿ ಶಂಕರ್ ಡಿ ಕಾಳೆ ತಿಳಿಸಿದರು.
ಪಟ್ಟಣದಲ್ಲಿಂದು ಪಪಂ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಗಳೊಂದಿಗೆ ಹೋಂ ಐಸಲೊಷನ್ ನಲ್ಲಿರುವ ಮನೆಗಳಿಗೆ ತೆರಳಿ ಕೋವಿಡ್ ಕೇರ್ ಸೆಂಟರ್ ಗೆ ಸೇರುವಂತೆ ಮನವರಿಕೆ ಮಾಡಿದರು.
ನಂತರ ಹೋಗದೆ ಇರುವವರಿಗೆ ಮಾಹಿತಿ ನೀಡಿ ಅವರ ಮನೆಗಳನ್ನು ಸೀಲ್ ಡೌನ್ ಮಾಡಿದರು. ಪಟ್ಟಣದಲ್ಲಿ ಮೇ 6 ರಿಂದ ಇದುವರೆಗೂ ಒಟ್ಟು 74 ಪಾಸಿಟಿವ್ ಸೊಂಕಿತರಿದ್ದು ಅದರಲ್ಲಿ 4 ಜನ ಮೃತಪಟ್ಟಿದ್ದು, 47 ಜನ ಗುಣಮುಖರಾಗಿದ್ದಾರೆ, ಇನ್ನುಳಿದ 23 ಜನ ಸೊಂಕಿತರು ಕೋವಿಡ್ ಕೇರ್ ಸೇರಿದಂತೆ ಹೋಂ ಐಸಲೊಷನ್ ನಲ್ಲಿದ್ದಾರೆಂದು ತಿಳಿದುಬಂದಿದೆ. ಸಾರ್ವಜನಿಕರು ಇದನ್ನು ಎಚ್ಚೆತ್ತುಕೊಂಡು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ನ ಹಿರಿಯ ಆರೋಗ್ಯ ಅಧಿಕಾರಿ ಪ್ರಾಣೇಶ ಬಳ್ಳಾರಿ, ಕಂದಾಯ ಇಲಾಖೆಯ ಸೂರ್ಯಕಾಂತ ಮಸ್ಕಿ, ಫಾರುಖ್ ನಾಡಗೌಡ, ಶಾಮೂರ್ತಿ ಸಿದ್ದಾಪುರ, ಪಪಂ ಸಿಬ್ಬಂದಿ ಅಬ್ದುಲ್ ಖಾದರ, ಶರಣು ಸೈಂದರ್, ಮರೇಶ ನಾಯಕ ಇನ್ನಿತರರಿದ್ದರು.