Friday , November 22 2024
Breaking News
Home / Breaking News / ಕರೊನಾ ಸಂಕಷ್ಟದಲ್ಲಿ ಮಾನವೀಯತೆ ಮೆರೆದು ಮಾದರಿಯಾದ ಪೊಲೀಸ್ ಅಧಿಕಾರಿಗಳು..!

ಕರೊನಾ ಸಂಕಷ್ಟದಲ್ಲಿ ಮಾನವೀಯತೆ ಮೆರೆದು ಮಾದರಿಯಾದ ಪೊಲೀಸ್ ಅಧಿಕಾರಿಗಳು..!

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಕರೊನಾ ಸಂಧರ್ಬದಲ್ಲಿ ಪೊಲೀಸ್ ಇಲಾಖೆಯಲ್ಲಿದ್ದು ತಮ್ಮ ಬಿಡುವಿಲ್ಲದ ಕರ್ತವ್ಯದ ಜೊತೆಗೆ ಜನರ ಮದ್ಯದಲ್ಲಿದ್ದುಕೊಂಡು ಮಾನವೀಯತೆ ಮೆರೆದ ಇಬ್ಬರು ಸಿಪಿಐ ಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರಾರಾಗಿದ್ದಾರೆ.

ಈ ಹಿಂದೆ ತಾವರಗೇರಾ ಪಟ್ಟಣದಲ್ಲಿ ಪಿಎಸ್ಐ ಆಗಿ ಕೆಲಸ ನಿರ್ವಹಿಸಿ ನಂತರ ಮುಂಬಡ್ತಿ ಹೊಂದಿ ಲಿಂಗಸಗೂರಿನ ಸಿಪಿಐ ಆಗಿರುವ ಮಹಾಂತೇಶ ಸಜ್ಜನ ಹಾಗೂ ಕುಷ್ಟಗಿಯ ನೂತನ ಸಿಪಿಐ ಆಗಿರುವ ನಿಂಗಪ್ಪ ಎನ್ ಆರ್ ಇವರೇ.

ಕರೊನಾ ಸಂದರ್ಭದಲ್ಲಿ ಕೊವೀಡ್ ಪಾಸಿಟಿವ್ ಆಗಿದ್ದ ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದು ನನಗೆ ಸರ್ಕಾರಿ ಆಸ್ಪತ್ರೆಗೆ ಸೇರಿಸಬೇಕೆಂದು ಸಿಪಿಐ ನಿಂಗಪ್ಪ ಎನ್ ಆರ್ ಇವರಲ್ಲಿ ಮನವಿ ಮಾಡಿಕೊಂಡಾಗ, ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿಪಿಐ ಅವರು ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ|| ಕೆ ಎಸ್ ರೆಡ್ಡಿ ರೊಂದಿಗೆ ಮಾತನಾಡಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ತಿಳಿಸಿದರು. ಜೊತೆಗೆ ಆ ಮಹಿಳೆಗೆ ಧೈರ್ಯ ತುಂಬುವ ಕೆಲಸಮಾಡಿ ಮಾನವೀಯತೆ ಮೆರೆದರೇ ಇತ್ತಲಿಂಗಸಗೂರಿನ ಸಿಪಿಐ ಮಹಾಂತೇಶ ಸಜ್ಜನ ಅವರು ಅಂಧ ಕಲಾವಿದರಿಗೆ ಆರ್ಥಿಕ ಸಹಾಯ ನೀಡಿ ಅವರ ಸ್ವ ಗ್ರಾಮಕ್ಕೆ ವಾಹನ ಸೌಕರ್ಯ ಕಲ್ಪಿಸಿ ಕಳುಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಕರಡಕಲ್ ನ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಅಂಧ ಕಲಾವಿದರಿಗೆ ಸಹಾಯಹಸ್ತ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರ ರಾಗಿದ್ದಾರೆ.ಇಂತಹ ಅಧಿಕಾರಿಗಳ ಸೇವೆಯನ್ನು ಬೇರೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಉದಯವಾಹಿನಿ ಯ ಆಶಯ ವಾಗಿದೆ.

About N Shameed

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!