Thursday , September 19 2024
Breaking News
Home / Breaking News / ದಿನಸಿ ಬೆಲೆ ಹೆಚ್ಚಳದಲ್ಲಿ ಮುದಗಲ್ ಪುರಸಭೆ ಅಧಿಕಾರಿಗಳು ಶಾಮೀಲ್ : ಕರವೇ ಆರೋಪ

ದಿನಸಿ ಬೆಲೆ ಹೆಚ್ಚಳದಲ್ಲಿ ಮುದಗಲ್ ಪುರಸಭೆ ಅಧಿಕಾರಿಗಳು ಶಾಮೀಲ್ : ಕರವೇ ಆರೋಪ

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ : ನಾಗರಾಜ್ ಎಸ್ ಮಡಿವಾಳರ್ 

ಮುದಗಲ್ : ಜನರ ದಿನನಿತ್ಯದ ಬದುಕಿಗೆ ಅಗತ್ಯ ದಿನಸಿ, ವಸ್ತುಗಳ ಬೆಲೆ ಹೆಚ್ಚಳದಲ್ಲಿ ಪುರಸಭೆ ಅಧಿಕಾರಿಗಳು ಶಾಮೇಲ್ ಆಗಿದ್ದಾರೆ ಕಿರಾಣಿ ವ್ಯಾಪಾರಸ್ಥರ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಉಪ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ಅಧ್ಯಕ್ಷ ಎಸ್.ಎ.ನಯೀಮ್ ಜುನೈದಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಮಹಾಮಾರಿ ಕರೋನ ವೈರಸ್ ಹರಡುವಿಕೆ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ನಂತಹ ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರ ಬದುಕಿಗೆ ಅಗತ್ಯ ವಸ್ತುಗಳಾದ ದಿನಸಿ, ಹಣ್ಣು, ತರಕಾರಿ, ಹಾಲು ಖರೀದಿಗೆ ಸಮಯ ನಿಗದಿ ಮಾಡಿದೆ ಅದನ್ನೇ ಬಂಡವಾಳವಾಗಿ ಮಾಡಿಕೊಂಡ ಕಿರಾಣಿ ವ್ಯಾಪಾರಸ್ಥರು ದಿನಸಿ ವಸ್ತುಗಳ ಮೇಲಿನ ಎಂ. ಆರ್, ಪಿ. ದರಕ್ಕಿಂತಲೂ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಲಾಕ್ ಡೌನ್ ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜನರ ಸ್ಥಿತಿ ಗಂಭೀರವಾಗಿದೆ ದುಡಿಯುವ ಕೈಗಳಿಗೆ ಕೆಲಸವಿಲ್ಲ ಇಂತಹ ಸಮಯದಲ್ಲಿ ಮಾನವೀಯತೆ ಮರೆತು ವ್ಯಾಪಾರಸ್ಥರು ದಿನಸಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಗ್ರಾಹಕರಿಗೆ ರಸೀದಿ ಸಹ ಕೊಡುತ್ತಿಲ್ಲ, ಸರಕಾರದ ಕರೋನ ನಿಯಮಗಳನ್ನು ಸಹ ಕಾಪಾಡಿಕೊಳ್ಳದೆ ರಾಜಾರೋಷವಾಗಿ ವ್ಯಾಪಾರ ನಡೆಸುತ್ತಿದ್ದು, ಕೆಲವು ಕಿರಾಣಿ ವ್ಯಾಪಾರಸ್ಥರು ಸಾಯಂಕಾಲ ಏಳೂವರೆಯ ಸಮಯದಲ್ಲಿ ದಿನಸಿ ಗಳನ್ನು ಪ್ಯಾಕ್ ಮಾಡಿ ಜೋಡಿಸುವ ನೆಪವೊಡ್ಡಿ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿ ಸರಕಾರದ ಆದೇಶವನ್ನು ಕೂಡ ಗಾಳಿಗೆ ತೂರಿದ್ದಾರೆ. ಇದನ್ನು ಕಂಡು ಕಾಣದಂತೆ ಪುರಸಭೆಯ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಪುರಸಭೆಯ ಅಧಿಕಾರಿಗಳು ವ್ಯಾಪಾರಸ್ಥರ ಜೊತೆ ಶಾಮೀಲಾಗಿ ಬಡವರ ರಕ್ತವನ್ನು ಹೀರುತ್ತಿದ್ದಾರೆ.ಕಿರಾಣಿ ವ್ಯಾಪಾರಸ್ಥರ ವಿರುದ್ಧ ಮತ್ತು ಪುರಸಭೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಪ್ರತಿಯೊಂದು ಅಂಗಡಿಗಳ ಮುಂದೆ ಅಗತ್ಯ ವಸ್ತುಗಳ ದರದ ಪಟ್ಟಿ ಲಗತ್ತಿಸಿ ಆದೇಶ ಹೊರಡಿಸಿ ಬಡ ಜನರಿಗೆ ಅನುಕೂಲ ಮಾಡಿಕೊಡಲು ಉಪ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ಅಧ್ಯಕ್ಷ ಎಸ್.ಎ.ನಯೀಮ್ ಜುನೈದಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಸಾಬು ಹುಸೇನ, ಮಹಾಂತೇಶ ಚೆಟ್ಟರ, ಎಸ್.ಖಾದ್ರಿ, ನಾಗರಾಜ ನಾಯಕ, ಅವೇಜ್ ಪಾಶ ಇದ್ದರು.

 

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!