ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ಕುಷ್ಟಗಿ: ಕರೊನಾ ಸೊಂಕಿತ ವ್ಯಕ್ತಿಯೊಬ್ಬ ಕೊವೀಡ್ ಕೇರ್ ಸೆಂಟರ್ ಗೆ ಬರುವಂತೆ ಹೇಳಿದರೆ ಭಯಭೀತಿಯಿಂದ ಗುಡ್ಡಕ್ಕೆ ತೆರಳಿ ಅಡಗಿಕೊಂಡ ಘಟನೆ ಹಿರೇಮನ್ನಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮೀಣ ಪ್ರದೇಶದಲ್ಲಿ ಕರೊನಾ ವೈರಸ್ ಹೆಚ್ಚಾಗಿ ಹರಡುತ್ತಿದ್ದು ಇದನ್ನು ನಿಯಂತ್ರಿಸಲು ಹೋಂ ಐಸಲೋಷನ್ ನಲ್ಲಿರುವ ಸೊಂಕಿತರನ್ನು ಕೊವೀಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕುಷ್ಟಗಿ ಪಿಎಸ್ಐ ತಿಮ್ಮಣ್ಣ ನಾಯಕ, ತಾಲೂಕ ಪಂಚಾಯತ್ ಇಓ ತಿಮ್ಮಪ್ಪ ಹಿರೇಮನ್ನಾಪುರಕ್ಕೆ ತೆರಳಿ ಸೊಂಕಿತನನ್ನು ಕೋವಿಡ್ ಕೇರ ಸೆಂಟರ್ ಗೆ ಕರೆತರಲು ಬಂದ ಸುಳಿವನ್ನು ಅರಿತ ವ್ಯಕ್ತಿಯೊಬ್ಬ ಗುಡ್ಡದ ಪಕ್ಕದಲ್ಲಿ ಅಡಗಿಕುಳಿತಿದ್ದನು ಇದನ್ನು ಕಂಡ ಪೊಲೀಸ್ ರು ವ್ಯಕ್ತಿಗೆ ಮನವೊಲಿಸಿ ನಿನ್ನ ಆರೋಗ್ಯ ಮತ್ತು ನಿನ್ನ ಕುಟುಂಬಸ್ಥರ ಆರೋಗ್ಯದ ದೃಷ್ಟಿಯಿಂದ ನೀನು ಕೊವೀಡ್ ಕೇರ್ ಸೆಂಟರಗೆ ದಾಖಲಾಗುವಂತೆ ಮನವೊಲಿಸಿದ ನಂತರ ಆ ವ್ಯಕ್ತಿ ಬರಲು ಒಪ್ಪಿದ್ದಾನೆ. ನಂತರ ಆ ವ್ಯಕ್ತಿಯನ್ನು ಕೊವೀಡ್ ಕೇರ್ ಸೆಂಟರಗೆ ಶಿಫ್ಟ್ ಮಾಡಲಾಯಿತು.
ಈ ಸಂದರ್ಭದಲ್ಲಿ ಪಿಎಸ್ಐ ತಿಮ್ಮಣ್ಣ ನಾಯಕ ಮಾತನಾಡಿ ಹೀರೆಮನ್ನಾಪುರ ಗ್ರಾಮದಲ್ಲಿ ಸೊಂಕಿತರ ಪ್ರಮಾಣ ಹೆಚ್ಚಿದ್ದು ಈಗಾಗಲೇ ಹೋಂ ಐಸಲೊಷನ್ ನಲ್ಲಿರುವ 11 ಮಂದಿಯನ್ನು ಕೊವೀಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿಸಿದರು.