Thursday , September 19 2024
Breaking News
Home / Breaking News / ಮುದಗಲ್  : 88ಕ್ಕೆ ಏರಿದ ಸೋಂಕಿತರ ಸಂಖ್ಯೆ…! 

ಮುದಗಲ್  : 88ಕ್ಕೆ ಏರಿದ ಸೋಂಕಿತರ ಸಂಖ್ಯೆ…! 

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

 ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಮಹಾಮಾರಿ ಕರೋನ ಎರೆಡನೆ ಅಲೆಯ ಹರಡುವುಕೆ  ತಡೆಗಟ್ಟುವ ನಿಟ್ಟಿನಲ್ಲಿ   ರಾಜ್ಯ ಸರ್ಕಾರದ ಲಾಕ್ ಡೌನ್ ನಂತಹ ಮಾರ್ಗಸೂಚಿಗಳನ್ನು ಸೂಚಿಸಿ ಕಠಿಣ ಕ್ರಮಗಳನ್ನು ವಹಿಸಿದ್ದರು ಕೂಡ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ  ಇದೀಗ ಮುದಗಲ್  ಪಟ್ಟಣದಲ್ಲೇ 88 ಜನರಿಗೆ ಸೋಂಕು ಇರುವುದು ಖಚಿತವಾಗಿದೆ.ಪಟ್ಟಣದಲ್ಲಿಗ
ಒಟ್ಟು ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದ್ದು   ಇದುವರೆಗೆ 52 ಮಂದಿ ಗುಣಮುಖರಾಗಿದ್ದಾರೆ. ಲಿಂಗಸಗೂರು ಸಮೀಪದ ಕಡಕಲ್ ಬಳಿಯ ಕೋವಿಡ್ ಐಶೂಲೇಷನ್ ಕೇಂದ್ರದಲ್ಲಿ 11ಜನರನ್ನ  ಐಶೂಲೇಷನ್ ಮಾಡಲಾಗಿದ್ದು. ಇನ್ನು ಪಟ್ಟಣದಲ್ಲಿ   ಸಕ್ರಿಯ ಪ್ರಕರಣಗಳ 25 ಸೊಂಕಿತರು ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ 25 ಜನರನ್ನು 14 ದಿನಗಳ ಕಾಲ  ಹೋಮ್ ಐಶುಲೇಷಲ್  ಮಾಡಲಾಗಿದ್ದು  ಅವರಿಗೆ  ಸಮುದಾಯ ಆರೋಗ್ಯ ಕೇಂದ್ರದ  ಸಿಬ್ಬಂದಿಗಳಿಂದ ಚಿಕಿತ್ಸೆ ನೀಡಿ ದಿನೇ ದಿನೇ ಆರೋಗ್ಯ ಸ್ಥಿತಿ ಬಗ್ಗೆ ನಿಗವಹಿಸಿದ್ದಾರೆ. ಅವರ ಕುಟುಂಬಸ್ಥರಿಗೂ, ಸಂಪರ್ಕದಲ್ಲಿದವರ   ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು.ಪಟ್ಟಣದ ಸಾರ್ವಜನಿಕರು ಸರಕಾರದ ಕರೋನ ನಿಯಮಗಳನ್ನು ಪಾಲಿಸಿ , ಕೋವಿಡ್ ವ್ಯಾಕ್ಷಿಕ್ ಹಾಕಿಸಿಕೊಳ್ಳಿ ,ನಿಮಗೆ ನೆಗಡಿ ಜ್ವರ, ಕೆಮ್ಮು, ಕರೋನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಕರೋನ ಪರೀಕ್ಷೆ ಮಾಡಿಸಿ ಸ್ವಯಂ ಹೋಮ್  ಕ್ವಾರೆಂಟೇನ್ ಆಗಿ, ಆರೋಗ್ಯ ಸಿಬ್ಬಂದಿಗಳೊಂದಿಗಳಿಗೆ ಸಹಕರಿಸಿ,  ನಾವೆಲ್ಲ ಸೇರಿ ಕರೋನ ಓಡಿಸಬೇಕು ಎಂದು ಮುದಗಲ್ ಸಮುದಾಯದ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಅನಂತ್ ಕುಮಾರ್ ಸಾರ್ವಜನಿಕರಿಗೆ ಮಾನವಿ ಮಾಡಿದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!