Thursday , September 19 2024
Breaking News
Home / Breaking News / ಮುದಗಲ್ : ನಾಳೆ  ಮದ್ಯಾಹ್ನ 2ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ 

ಮುದಗಲ್ : ನಾಳೆ  ಮದ್ಯಾಹ್ನ 2ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ 

ಪ್ರೀತಿಯ ಓದುಗ ದೊರೆಗಳೇ,

ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ :  ಕರೋನ ಸೋಂಕು  ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು. ನಾಳೆ ಅಂದರೆ ಭಾನುವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ರವರೆಗೆ ಪಟ್ಟಣದಲ್ಲಿ  ಅಗತ್ಯ ವಸ್ತುಗಳಾದ  ಹಣ್ಣು, ತರಕಾರಿ, ಕಿರಾಣಿ ಅಂಗಡಿ, ಮಾಂಸ ಖರೀದಿಸಲು ಜಿಲ್ಲಾಧಿಕಾರಿಗಳ ಆದೇಶದಂತೆ ಮುದಗಲ್ ಪುರಸಭೆ ಅವಕಾಶ ಕಲ್ಪಿಸಿದೆ. ಕಿರಾಣಿ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳ ಮುಂದೆ ಕರೋನ ಮಾರ್ಗಸೂಚಿಗಳನ್ನು ಪಾಲಿಸಿ ವ್ಯಾಪಾರ ನಡೆಸಬೇಕು ಸಾರ್ವಜನಿಕರು ಖರೀದಿ ವೇಳೆ  ವಾಹನಗಳ ಮುಖಾಂತರ ಗುಂಪು ಗುಂಪಾಗಿ ಬರುವುದರಿಂದ ಸೋಂಕು ಹರಡುವ ಭೀತಿ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಪುರಸಭೆ ಪಟ್ಟಣದ 12 ಕಡೆಗಳಲ್ಲಿ  ಹಣ್ಣು, ತರಕಾರಿ ವ್ಯಾಪಾರಕ್ಕೆ ಸ್ಥಳ ನಿಗದಿಮಾಡಿತ್ತು. ವ್ಯಾಪರಸ್ಥರು ಅದೇ ಸ್ಥಳಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಕರೋನ ನಿಯಮ ಪಾಲಿಸಿ ವ್ಯಾಪಾರ   ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸೂಚಿಸಿದರು. ಹಾಗೂ ಪಟ್ಟಣದ ಪೊಲೀಸ್ ಠಾಣೆಯಿಂದ  ಟ್ರಾಫಿಕ್  ಸಮಸ್ಯೆ ತಡೆಯಲು ಹೊಸ ಸೂಚನೆ ನೀಡಿದ್ದು ಭಾನುವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಾರಿ, ಟ್ರಕ್, ಭಾರಿ ಪ್ರಮಾಣದ ವಾಹನಗಳಿಗೆ ಮುದಗಲ್  ಪಟ್ಟಣದ ಒಳಗಡೆ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ  ಹಾಗೂ ಪಟ್ಟಣದಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಗಾಗಿ ವಿವಿಧಕಡೆಗಳಲ್ಲಿ  ಸ್ಥಳಗಳನ್ನು  ಗುರುತಿಸಿದೆ ಪಟ್ಟಣಕ್ಕೆ ಮೇಗಳಪೇಟೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ  ಈದ್ಗ ಮೈದಾನದಲ್ಲಿ , ಹಳೇಪೇಟೆಯಿಂದ, ಮಸ್ಕಿ ರಸ್ತೆಯಿಂದ  ಬರುವ ವಾಹನಗಳಿಗೆ  ನೀರದೊಡ್ಡಿಯ ಶಾಲೆ ಆವರಣದಲ್ಲಿ, ಕಿಲ್ಲಾದಿಂದ ಬರುವ ವಾಹನಗಳಿಗೆ  ಚಾವಡಿಕಟ್ಟಿ ಮೈದಾನದಲ್ಲಿ ,ಲಿಂಗಸಗೂರು ರಸ್ತೆಯಿಂದ ಬರುವ ವಾಹನಗಳಿಗೆ ನಾಡಕಛೇರಿ ಆವರಣದಲ್ಲಿ  ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು. ಈ  ಸ್ಥಳದಲ್ಲಿ ಖರೀದಿಗೆ ಬರುವ  ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಬೇಕು.ನಿಯಮ ಪಾಲನೆ ಮಾಡದಿದ್ದರೆ ದಂಡಕ್ಕೆ ಗುರಿಯಗಬೇಕಾಗುತ್ತದೆ. ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು  ಕರೋನ ನಿಯಮ ಪಾಲಿಸಿ ವ್ಯಾಪಾರ ಮಾಡಬೇಕು ಕಡ್ಡಾಯವಾಗಿ ಕರೋನ ಮಾರ್ಗಸೂಚಿಗಳನ್ನು  ಪಾಲಿಸಬೇಕು  ಪಾಲಿಸಿದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು  ಪಿಎಸ್ಐ ಡಾಕೇಶ್ ಸಾರ್ವಜನಿಕರಿಗೆ ಸೂಚಿಸಿದ್ದಾರೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!