ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ: ಪಂಪನಗೌಡ.ಬಿ.ಬಳ್ಳಾರಿ.
ಬಳ್ಳಾರಿ ಮೇ 19. ಬಳ್ಳಾರಿ ಜಿಲ್ಲೆಯ ಕೊರೊನಾ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಜಿಲ್ಲಾ ಪೊಲೀಸ್ ಇಲಾಖೆಯ ವಾಹನಗಳ ಖರೀದಿಗಾಗಿ ವೀರಶೈವ ವಿದ್ಯಾವರ್ಧಕ ಸಂಘದ ಖಜಾಂಚಿ ಹಾಗೂ ಸಿದ್ದಾರ್ಥ್ ಟ್ರೇಡಿಂಗ್ ಕಾರ್ಪೊರೇಷನ್ ಮಾಲಿಕ ಗೋನಾಳ್ ರಾಜಶೇಖರಗೌಡ ಅವರು ನಿಸ್ವಾರ್ಥ ಮನಸ್ಸಿನಿಂದ 50 ಲಕ್ಷ ರೂಪಾಯಿಗಳ ನೆರವನ್ನು ಬಳ್ಳಾರಿ ಪೋಲೀಸ್ ಇಲಾಖೆಗೆ ನೀಡಿದ್ದಾರೆ . ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ 50 ಲಕ್ಷ ರೂ ಚೆಕ್ಕನ್ನು ವಿತರಣೆ ಮಾಡಿದರು. ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಶ್ರಮಿಸುತ್ತಿದೆ, ಕೊರೋನ ನಿಯಂತ್ರಿಸಲು ಇಡೀ ಪೊಲೀಸ್ ಸಿಬ್ಬಂದಿ ಹಗಲಿರುಳು ಎನ್ನದೆ ಕೆಲಸ ಮಾಡುತ್ತಿದೆ ಎಂದರು. ಇಲಾಖೆಗೆ ನಾಲ್ಕು ಚಕ್ರಗಳ ವಾಹನಗಳ ಅಗತ್ಯವಿದೆ ಎಂಬುದನ್ನು ಅರಿತ ಗೋನಾಳ್ ರಾಜಶೇಖರಗೌಡ ಅವರು 50 ಲಕ್ಷ ರೂಪಾಯಿಗಳನ್ನು ವಾಹನಗಳ ಖರೀಗೆ ನೀಡಲಾಗಿದೆ ಎಂದರು. ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆಕ್ ಸ್ವೀಕರಿಸಿದರು. ಈ ಕುರಿತು ಮಾತನಾಡಿದ ಗೋನಾಳ್ ರಾಜ ಶೇಖರ್‌ಗೌಡ ಅವರು ಸಿದ್ದಾರ್ಥ್ ಟ್ರೇಡಿಂಗ್ ಕಾರ್ಪೊರೇಷನ್ ಇಂದ ಈವರಗೆ ಅನೇಕ ಸೇವಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ ಎಂದು, ಕೊರೋನ ಸಂದರ್ಭದಲ್ಲಿ ಸಾಕಷ್ಟು ಸೇವಾ ಕಾರ್ಯಕ್ರಮಗಳನ್ನು ಮಾಡಿದ್ದೇನೆ ಎಂದರು. ಇವರ ಕಾರ್ಯವೈಖರಿಗೆ ಜಿಲ್ಲಾಡಳಿತ ಹಾಗು ಪೋಲೀಸ್ ಇಲಾಖೆ ಮೆಚ್ಚುಗೆಯನ್ನು ವ್ಯಕ್ತ ಮಾಡಲಾಗಿದೆ.