ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ : ಪಂಪನಗೌಡ.ಬಿ.ಬಳ್ಳಾರಿ.
ಬಳ್ಳಾರಿ,ಮೇ,19:ಬಳ್ಳಾರಿ ಜಿಲ್ಲೆಗೆ ನೂತನ ಲೋಕಾಯುಕ್ತ ಎಸ್ಪಿಯಾಗಿ ಎಚ್. ಮಂಜುನಾಥ ಬಾಬು ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ಬೆಂಗಳೂರು ವಿಭಾಗದ ಜೆ.ಸಿ.ನಗರ ಮತ್ತು ಸುಬ್ರಹ್ಮಣ್ಯ ಪುರಂಗಳಲ್ಲಿ ಸಹಾಯಕ ಪೋಲಿಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಎಸ್.ಪಿ. ಹುದ್ದೆಗೆ ಬಡ್ತಿ ಪಡೆದ ನಂತರ ಬಳ್ಳಾರಿ ಜಿಲ್ಲೆಯ ನೂತನ ಲೋಕಾಯುಕ್ತ ಎಸ್.ಪಿ ಯಾಗಿ ಅವರು ಮೇ19 ರ ಬುಧವಾರ ಅಧಿಕಾರ ಸ್ವೀಕರಿಸಿದರು.
ಈ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಲೋಕಾಯುಕ್ತ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.