ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ..
……………………………………………….
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ವಿಜಯ ಮಹಾಂತೇಶ್ವರ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕರೋನ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ನಿರ್ಗತಿಕರಿಗೆ ಆಹಾರ ಧಾನ್ಯ ಕಿಟ್ ಉಚಿತವಾಗಿ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಯಚೂರು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಶಿಕಲಾ ಬೋವಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಕ್ಕೆ ಸದಾ
ಎನಾದರೂ ಹೊಸತೊಂದು ಕೊಡುಗೆ ನೀಡಬೇಕೆನ್ನುವ ಹಂಬಲ,
ಕೊರೋನಾ ವೈರಸ್ ಬೀತಿಯಲ್ಲಿದ್ದವರಿಗೆ ಸಾಮಾನ್ಯ ಜನರಿಗೆ ಎದುರಾಗುವ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಬಡ, ಸಾಮಾನ್ಯ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಳಿದುಕೊಂಡಿದೆ.ಕರೋನ ಕಾಲದಲ್ಲಿ ಅಪಾಯದಲ್ಲಿದ್ದ ನಿರ್ಗತಿಕರಿಗೆ ಈ ದವಸ,
ಧನ್ಯ ದಾರಿ ದೀಪವಾಗಿರಲಿದೆ ನಾವೆಲ್ಲ ಸೇರಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಜನರ ನೆರವಿಗೆ ಮುಂದಾಗುವ ಅವಶ್ಯಕತೆ ಇದ್ದು ನಾವೆಲ್ಲ ಸೇರಿ ಸಂಸ್ಥೆಯೊಂದಿಗೆ ಸಹಕರಿಸೋಣ ಎಂದರು. ಈ ಸಂದರ್ಭದಲ್ಲಿ ಮುದಗಲ್, ನಾಗಲಾಪುರ ಮೇಲ್ವಿಚಾರಕಿ ರಾಧಾ ಜಿ, ಸೇವಾ ಪ್ರತಿನಿಧಿಗಳು ಇದ್ದರು.