Thursday , September 19 2024
Breaking News
Home / Breaking News / ತಾವರಗೇರಾ: ಕಾಂಗ್ರೇಸ್ ಮುಖಂಡ ಅಕಾಲಿಕ ಸಾವು, ಕಾರ್ಯಕರ್ತರಿಂದ ಭಾವಪೂರ್ಣ ಶ್ರದ್ದಾಂಜಲಿ..!

ತಾವರಗೇರಾ: ಕಾಂಗ್ರೇಸ್ ಮುಖಂಡ ಅಕಾಲಿಕ ಸಾವು, ಕಾರ್ಯಕರ್ತರಿಂದ ಭಾವಪೂರ್ಣ ಶ್ರದ್ದಾಂಜಲಿ..!

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾದ ಉಮೇಶ ಉಪ್ಪಳ ಹೃದಯಾಘಾತದಿಂದ ನಿಧನ ರಾಗಿದ್ದು ಸ್ಥಳೀಯ ಹೊಸ ಬಸ್ ನಿಲ್ದಾಣದ ಆಟೋ ಚಾಲಕರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಬಸನಗೌಡ ಮಾಲಿಪಾಟೀಲ್ ಮಾತನಾಡಿ, ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಲ್ಲಿ ಉಮೇಶ ಉಪ್ಪಳ ಒಬ್ವರಾಗಿದ್ದು ಸ್ನೇಹ ಜೀವಿ ಯಾಗಿದ್ದ ಅವರು ಇಂದು ನಮ್ಮನ್ನು ಅಗಲಿರುವುದು ತುಂಬಲಾರದ ನಷ್ಟವಾಗಿದ್ದು ಅವರ ಆತ್ಮಕ್ಕೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಭಗವಂತನು ಶಾಂತಿಯನ್ನು ಕರುಣಿಸಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಿರಭದ್ರಪ್ಪ ನಾಲತವಾಡ, ದುರುಗೇಶ ನಾರಿನಾಳ, ಅಮರೇಶ ಗಾಂಜಿ, ವೀರಭದ್ರಗೌಡ ರಾಂಪೂರ, ರುದ್ರಗೌಡ ಕುಲಕರ್ಣಿ, ರಾಮಣ್ಣ ಭೋವಿ, ವಿರೇಶ ಭೋವಿ, ಚಂದ್ರು ಬನ್ನಿಕಟ್ಟಿ, ಜಿಲಾನಿ ಬಳೂಟಗಿ, ನಾಗರಾಜ ಮೇದಾರ, ಶಾಮೀದ್ ನಾಡಗೌಡ ಸೇರಿದಂತೆ ಆಟೋ ಚಾಲಕರು ಉಪಸ್ಥಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!