ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ಕೊಪ್ಪಳ : ಚಿರತೆ ದಾಳಿಗೆ 32 ಬದುಕುಗಳು (ಆಡು, ಹೋತಾ ಹಾಗೂ ಕುರಿಗಳು) ಬಲಿಯಾಗಿರುವ ಘಟನೆ ಮಂಗಳವಾರ ಬೆಳಗಿನ ಜಾವ ಜರುಗಿದೆ..!
ಜಿಲ್ಲೆಯ ಗಂಗಾವತಿ ನಗರದ ಜಯನಗರದ ಹೊರವಲಯದ ದೇಸಾಯಿ ಅವರ ನಿವಾಸದ ಬಳಿ ಭತ್ತದ ಗದ್ದೆಯಲ್ಲಿ ಹಾಕಿದ ದಡ್ಡಿಯೊಳಗೆ ಮೂರು ಚಿರತೆಗಳು ಏಕಾ ಎಕಿ ದಾಳಿ ನಡೆಸಿವೆ. ರಕ್ತ ಹಿರುವ ಮೂಲಕ ಅಟ್ಟಾ ಹಾಸ ಮುಂದುವರೆಸಿರುವ ಮೂರು ಚಿರತೆಗಳು ತುಂಬಿಕೊಂಡ ಕುರಿ ದಡ್ಡಿಯಲ್ಲಿರುವ 21 ಆಡುಮರಿ, 10 ಹೋತಾ ಹಾಗೂ ಒಂದು ಕುರಿಮರಿಯನ್ನು ಜೀವ ತೆಗೆದುಕೊಂಡಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಗಂಗಾವತಿ ತಾಲೂಕಾ ಪಶು ವೈದ್ಯಾಧಿಕಾರಿ ಡಾ.ಪಿ.ಎಂ.ಮಲ್ಲಯ್ಯ ತಿಳಿಸಿದ್ದಾರೆ. ಅಂದಾಜು 3 ಲಕ್ಷ ರೂಪಾಯಿಗಳ ಹಾನಿ ಅನುಭವಿಸಿದ ಕುರಿಗಾರ ಯಮನೂರಪ್ಪ ಚಿಲ್ಕಮುಖಿ ಪರಿಹಾರಕ್ಕಾಗಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..!!