ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ಕೊಪ್ಪಳ: ಈ ಹಿಂದೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ನಾಡ ತಹಶಿಲ್ದಾರರಾಗಿ ಹಾಗೂ ಕುಷ್ಟಗಿಯ ಗ್ರೇಡ್ 2, ಹಾಗೂ ಗ್ರೇಡ್ 1 ತಹಶಿಲ್ದಾರರಾಗಿ ಸೇವೆ ಸಲ್ಲಿಸಿ ಈಗ ಇಲಕಲ್ಲ ನ ತಹಶಿಲ್ದಾರರ ವೇದವ್ಯಾಸ ಮುತಾಲಿಕ್ (51) ಕರೊನಾಗೆ ಬಲಿಯಾಗಿರುವುದು ನೋವಿನ ಸಂಗತಿಯಾಗಿದೆ.
ಕೊಪ್ಪಳ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಕೂಡ ವಿಧಿಯಾಟದಿಂದ ಕರೊನಾ ವೈರಸ್ ನ ಮುಂದೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿರುವುದು ಕುಷ್ಟಗಿ ತಾಲೂಕಿನ ಜನತೆಗೆ ನಂಬಲಾರದ ಸಂಗತಿಯಾಗಿದೆ. ಈ ಹಿಂದೆ ಕುಷ್ಟಗಿ ಸೇರಿದಂತೆ ಹನುಮನಾಳ ಮತ್ತು ಕೊಪ್ಪಳದ ತರಬೇತಿ ಸಂಸ್ಥೆಯ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದಾಗಿದೆ. ಅವರ ನಿಧನ ಕ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್ ಸೇರಿದಂತೆ ಕುಷ್ಟಗಿ ತಹಶಿಲ್ದಾರ ಎಂ ಸಿದ್ದೇಶ, ಕಂದಾಯ ಇಲಾಖೆ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.