ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಐದು ದಿನಗಳ ಕಠಿಣ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ
ರವಿವಾರ ಅಗತ್ಯವಸ್ತುಗಳ ಖರೀದಿಗಾಗಿ ಜನರು ಮುಗಿಬಿದ್ದಿರುವುದು ಕಂಡು ಬಂದಿತು.
ತರಕಾರಿ, ಮಾಂಸ ಹಾಗೂ ಬಟ್ಟೆ ಕಿರಾಣಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ಜನರು ಬೈಕ್ ಟ್ರ್ಯಾಕ್ಟರ್ ಹಾಗೂ ಆಟೋಗಳಲ್ಲಿ ಆಗಮಿಸಿದ್ದರು.
ಪೊಲೀಸರು ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಮಾಸ್ಕ್ ಧರಿಸುವಂತೆ ಮನವಿ ಮಾಡಿದರೂ ಜನರು ಕೇಳಿಸಿಕೊಳ್ಳುವ ಸ್ಥಿತಿ ಯಲ್ಲಿರಲಿಲ್ಲ.
ತರಕಾರಿ, ಮಾಂಸದಂಗಡಿ, ಕಿರಾಣಿ ಮತ್ತು ಬಟ್ಟೆ ಅಂಗಡಿಗಳ ಮುಂದೆ ಜನಸ್ತೋಮವೇ ಕಂಡುಬಂದಿದೆ. ಮೇನ್ ಬಜಾರ, ಗಾಂಧಿ ಚೌಕ್, ಹಳೆಬಸ್ ನಿಲ್ದಾಣ ವೃತ್ತ, ಬಟ್ಟೆ ,ಕಿರಾಣಿ , ಬ್ಯಾಂಡೆ ಅಂಗಡಿಗಳಲ್ಲೂ ಜನರು ಮುಗಿಬಿದ್ದು ಸಾಮಗ್ರಿಗಳನ್ನು ಖರೀದಿಸಲು ಮುಗಿ ಬಿದ್ದಿರುವುದು ಕಂಡು ಬಂದಿತು.
ಅಭಿಪ್ರಾಯ: 5 ದಿನಗಳ ಸಂಪೂರ್ಣ ಲಾಕ್ ಡೌನ್ ಹಿನ್ನಲೆಯಲ್ಲಿ ಆರೋಗ್ಯ ದ ಹಿತ ದೃಷ್ಟಿಯಿಂದ ತಾಜಾ ತರಕಾರಿ ಯನ್ನು ತಳ್ಳು ಗಾಡಿಗಳ ಮೂಲಕ ಅನುಕೂಲ ಕಲ್ಪಿಸಿಕೊಟ್ಟಿದ್ದರೇ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತೆಂಬುದು ಪಟ್ಟಣದ ಜನರ ಅಭಿಪ್ರಾಯವಾಗಿತ್ತು.