ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಕರೊನಾ ಸೊಂಕಿತರು ಗ್ರಾಮದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುವದನ್ನು ಕಂಡು ಗ್ರಾಮಸ್ಥರು ಭಯ ಬೀತರಾದ ಘಟನೆ ಸಮೀಪದ ಜುಮಲಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿ ಗ್ರಾಮದಲ್ಲಿ ನಡೆದಿದೆ. ,
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಪಂ ಲೆಕ್ಕಸಹಾಯಕ ಮುದೇಗೌಡ ಪುಂಡಗೌಡರ ಮನೆಯಿಂದ ಅನಾವಶ್ಯಕವಾಗಿ, ಹೊರ ಬರದೇ ಆರೋಗ್ಯ ಇಲಾಖೆಯ ಆದೇಶ ಪಾಲಿಸಬೇಕು ಎಂದು ಹೇಳಿದರು.
ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗುವುದು. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದರು.ಗ್ರಾಮದಲ್ಲಿ ಮೂವರಲ್ಲಿ ಕೋವಿಡ್ ಇರುವುದು ತಿಳಿದಿದೆ. ಆರೋಗ್ಯ ಇಲಾಖೆಯನ್ವಯ ಸೋಂಕಿತರಲ್ಲಿ ಮೂವರನ್ನು ಹೋಂ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿದ್ದು, ಸೋಂಕು ತಡೆಗಟ್ಟಲು ಗ್ರಾಮದ ಎಲ್ಲಾ ರಸ್ತೆಗಳಿಗೂ ಸೋಂಕು ನಿವಾರಕ ದ್ರಾವಣವನ್ನು ಪಂಚಾಯಿತಿ ವತಿಯಿಂದ ಸಿಂಪಡಿಸಲಾಗುತ್ತದೆ. ಇದೇ ಪ್ರರುತ್ತಿ ಮುಂದುವರೆದರೆ ಪೊಲೀಸ್ ಠಾಣಿಗೆ ದೂರು ನೀಡಲಾಗುತ್ತದೆ ಎಂದು ಎಚ್ಚರಿಸಿದರು.
ಆಶಾ ಕಾರ್ಯಕರ್ತೆ, ಕರ ವಸೂಲಿಗಾರ ಲಕ್ಷ್ಮಣ ನಾಯಕ ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.