ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ; ಲಾಕ್ ಡೌನ್ ಹಿನ್ನಲೆಯಲ್ಲಿ ಸರಕಾರದ ನಿಯಮ ಪಾಲಿಸುವಂತೆ ಸ್ಥಳೀಯ ಸಿಂಧನೂರು ವೃತ್ತದಲ್ಲಿ ಠಾಣಾಧಿಕಾರಿ ಗೀತಾಂಜಲಿ ಶಿಂಧೆ ಮನವರಿಕೆ ಮಾಡಿಕೊಡಲು ಮುಂದಾದಾಗ ಮಹಿಳೆಯರು ಹಾಗೂ ಯುವಕ ಅವರ ಜೊತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ.
ಕಾರಿನಲ್ಲಿ ತೆರಳುತ್ತಿದ್ದ ಕುಟುಂಬದವರನ್ನು ಕರೊನಾ ಲಾಕ್ ಡೌನ ಹಿನ್ನಲೆಯಲ್ಲಿ ಮನೆಯಲ್ಲಿ ಇರುವಂತೆ ಸಾಕಷ್ಟು ಎಚ್ಚರಿಕೆ ನೀಡಿದರು ಕೂಡ ಸಾರ್ವಜನಿಕರು ಬೇಕಾ ಬಿಟ್ಟಿಯಾಗಿ ತಿರುಗಾಡುವದನ್ನು ನಿಲ್ಲಿಸಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದರು ಕೂಡ ಈ ಕುಟುಂಬ ಸದಸ್ಯರು ದೇವಸ್ಥಾನದ ನೆಪದಲ್ಲಿ ಹೊರಬಂದಿದ್ದನ್ನು ಪ್ರಶ್ನಿಸಿದ ಪೊಲೀಸ್ ರಿಗೆ ಅವಾಜ್ ಹಾಕಿದ್ದಕ್ಕೆ ಸ್ಥಳೀಯ ಪೊಲೀಸ್ ರು ಕಾರ ಅನ್ನು ಸೀಜ್ ಮಾಡಲು ಮುಂದಾಗಿದ್ದಾರೆ, ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಮಹಿಳೆಯರು ಹಾಗೂ ಒಬ್ಬ ಯುವಕ ಪೊಲೀಸ್ ರ ಕ್ರಮವನ್ನು ಪ್ರಶ್ನಿಸಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ ವಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ರು ಶ್ರಮಿಸುತ್ತಿದ್ದರು ಕೂಡ ಇಂತವರಿಂದಾಗಿ ಅವರ ಶ್ರಮ ವ್ಯರ್ಥವಾದಂತಾಗಿದೆ. ಈ ಬಗ್ಗೆ ಜನರು ಸಹಕಾರ ನೀಡಿ ಕರೊನಾ ವಾರಿಯಸ್೯ ಗೆ ಬೆಂಬಲಿಸಬೇಕೆಂಬುದು ಪ್ರಜ್ಞಾವಂತರ ಅಭಿಪ್ರಾಯ ವಾಗಿದೆ. ಈ ಸಂದರ್ಭದಲ್ಲಿ ಎಎಸ್ಐ ಗಳಾದ ಮಹ್ಮದ್ ಮೆಹಬೂಬ್, ಮಲ್ಲಪ್ಪ ವಜ್ರದ, ಸಿಬ್ಬಂದಿಗಳಾದ ಬಸವರಾಜ, ಗುಂಡಪ್ಪ, ಕರಿಯಪ್ಪ ಸೇರಿದಂತೆ ಇನ್ನಿತರ ಸಿಬ್ಬಂದಿ ಇದ್ದರು.