ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ; ಲಾಕ್ ಡೌನ ಮೊದಲನೇ ದಿನದಂದು 10 ಗಂಟೆಯ ನಂತರ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು ಕಂಡುಬಂದಿತು. ಪೊಲೀಸ್ ರು ಅನಗತ್ಯವಾಗಿ ಒಡಾಡುತ್ತಿದ್ದವರ ಬೈಕ್ ಗಳನ್ನು ಸೀಜ್ ಮಾಡುವ ಮೂಲಕ ಬೈಕ ಸವಾರರಿಗೆ ಬಿಸಿ ಮುಟ್ಟಿಸಿದರು. ಇಂದು ಒಟ್ಟು 13 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಎಸ್ಐ ಮಲ್ಲಪ್ಪ ವಜ್ರದ ತಿಳಿಸಿದ್ದಾರೆ.
ಲಾಕ್ ಡೌನ ಕುರಿತು 2 ದಿನದ ಮುಂಚೆಯೇ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು ಸಹ, ರೋಡ್ ಗೆ ಬರುವವರ ಮೇಲೆ ಕಠಿಣ ಕ್ರಮ ಕೈಗೊಂಡು ಸೀಜ್ ಮಾಡುವ ವಾಹನಗಳನ್ನು ಯಾವುದೇ ಕಾರಣಕ್ಕೂ ಲಾಕ್ ಡೌನ್ ಅವಧಿ ಮುಗಿಯುವವರೆಗು ವಾಪಸ್ ನೀಡುವುದಿಲ್ಲವೆಂದು ಮತ್ತು ನಾಳೆಯಿಂದ ಇನ್ನೂ ಕಠಿಣ ನಿಯಮವನ್ನು ಜಾರಿಗೊಳೊಸಲಾಗುತ್ತಿದ್ದು ಯಾವುದೇ ಕಾರಣಕ್ಕೂ ಸಾರ್ವಜನಿಕರು ರಸ್ತೆಗೆ ಬರದೇ ಕರೊನಾ ನಿಯಮಗಳನ್ನು ಪಾಲಿಸಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಂಕರ್ ಡಿ ಕಾಳೆ ಹಾಗೂ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.