Friday , November 22 2024
Breaking News
Home / Breaking News / ಸವಿತಾ ಸಮಾಜದ ಬಗ್ಗೆ ನಿಷೇದಿತ ಪದ ಬಳಕೆ : ಪ್ರಕರಣ ದಾಖಲು 

ಸವಿತಾ ಸಮಾಜದ ಬಗ್ಗೆ ನಿಷೇದಿತ ಪದ ಬಳಕೆ : ಪ್ರಕರಣ ದಾಖಲು 

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ಸವಿತಾ ಸಮಾಜದ ನಿಷೇದಿತ ಪದವನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ  ವಿಡಿಯೋ  ಹರಿಬಿಟ್ಟಿರುವ ಕಾರಣ ತಿಪ್ಪಣ್ಣ ಹೆಚ್  ಹಾಗೂ ಮೂಲ ವಿಡಿಯೋವನ್ನು ಕರ್ತರ  ವಿರುದ್ಧ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ನಡೆದಿದೆ.
ನಮ್ಮ ಲಿಂಗಸುಗೂರು ಎಂಬ ಹೆಸರಿನ ವಾಟ್ಸ್ ಆಪ್ ಗ್ರೂಪ್‌ನಲ್ಲಿ ಶ್ರೀ ತಿಪ್ಪಣ್ಣ ಹೆಚ್. ಎನ್ನುವ ವ್ಯಕ್ತಿ
ಹಜಾಮ” ಶಬ್ದವನ್ನು  ಬಳಕೆ ಮಾಡಿ ವಿಡಿಯೋ ಹರಿಬಿಟ್ಟಿದ್ದರು ಇದನ್ನು ಖಂಡಿಸಿ ಸವಿತಾ  ಸಮಾಜದ ಹಿರಿಯ ಮುಖಂಡ,ವಕೀಲ ನಾಗರಾಜ್ ಗಸ್ತಿ ರವರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ನಂತರ ಪತ್ರಿಕೆ ಯೊಂದಿಗೆ ಮಾತನಾಡಿದ ಅವರು  ಸಮಾಜದಲ್ಲಿ ಯಾರೋ ಮಾಡಿದ ತಪ್ಪಿಗೆ ಸವಿತಾ  ಸಮಾಜದ ಈ ನಿಷೇದಿತ ಶಬ್ದವನ್ನು ಬಳಸಿ ನಮ್ಮ ಸಮಾಜವನ್ನು ಅಪಮಾನಗೊಳಿಸುತ್ತಿರುವುದು ಖಂಡನಿಯ  ದಿನಾಂಕ 03-06-2011 ರಂದು ಕರ್ನಾಟಕ ರಾಜ್ಯದ ವಿಧಾನಸೌದ ಬೆಂಗಳೂರುದಿಂದ ಆದೇಶ ಸಂ. Cm/22475/min/2011 ಮುಖಾಂತರ “ಹಜಾಮ” ಎನ್ನುವ ಶಬ್ದವನ್ನು ಬಳಸದಂತೆ ಆದೇಶವನ್ನು ನೀಡಿರುತ್ತಾರೆ. ಅಲ್ಲದೇ ಈ ಆದೇಶವನ್ನು ದಿನಾಂಕ 18 ಅಗಸ್ಟ್ 2016ರ ಕರ್ನಾಟಕ ರಾಜ್ಯ ಪತ್ರದಲ್ಲಿಯೂ ಕೂಡ ಮಾನ್ಯ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಮಾನ್ಯಶ್ರೀ ಎನ್.ಆರ್.ಎರೆಕುಪ್ಪಿ ಸರ್ಕಾರ ಕಾರ್ಯದರ್ಶಿ-1 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದೇಶ ಕೂಡ ಆಗಿರುತ್ತದೆ  ಸಾರ್ವಜನಿಕರು  ಯಾರೋ ಮಾಡಿದ ತಪ್ಪಿಗೆ ನಮ್ಮ ಜಾತಿಯ ಹೆಸರನ್ನು ಬಳಸಿ ನಮ್ಮ ಸಮಾಜಕ್ಕೆ ಅವಮಾನವಾಗುವಂತೆ ಯಾರೂ ವಿಡಿಯೋಗಳನ್ನು, ಚಿತ್ರಗಳನ್ನು ವಾಟ್ಸಾಪ್‌ಗಳಲ್ಲಿ, ಅಥವಾ ಬೇರೆ ಯಾವುದೇ ಮಾಧ್ಯಮಗಳಲ್ಲಿ ಪ್ರದರ್ಶನ ಮಾಡಬಾರದು ಎಂದರು.

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!