ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ ಎನ್ ಶಾಮೀದ್ ತಾವರಗೇರಾ
ಕೊಪ್ಪಳ: ಕರೊನಾ ದೇಶದಾದ್ಯಂತ ಎರಡನೇ ಅಲೆ ಹೆಚ್ಚಾಗಿದ್ದು ಅದರಲ್ಲೂ ಕರ್ನಾಟಕದಲ್ಲಿ ದಿನನಿತ್ಯ 50 ಸಾವಿರಕ್ಕೂ ಹೆಚ್ಚು ಕೇಸುಗಳು ಜೊತೆಗೆ ಸಾವಿನ ಪ್ರಮಾಣ ಹೆಚ್ಚಾಗಿದ್ದರಿಂದಾಗಿ ಯಾವದೇ ಕ್ಷಣದಲ್ಲಾದರೂ ಸಂಪೂರ್ಣ ಲಾಕ್ ಡೌನ ಹಿನ್ನಲೆಯಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಶೇಖರಿಸಿ ಇಡಬೇಕಾದ ಅನಿವಾರ್ಯತೆ ಎದುರಾಗಿದ್ದು ಪಟ್ಟಣದಲ್ಲಿ ಪಟ್ಟಣದ ಜನತೆ 15 ದಿನ ಅಥವಾ 1 ತಿಂಗಳ ಮಟ್ಟಿಗೆ ಬೇಕಾಗುವ ದಿನನಿತ್ಯದ ದಿನಸಿ ಹಾಗೂ ಕಿರಾಣಿ ಸಾಮಾನನ್ನು ಕೊಂಡುಕೊಳ್ಳುವುದು ಒಳಿತು, ಲಾಕ್ ಡೌನ ಹೆಸರಿನಲ್ಲಿ ಮುಂದೆ ಕಿರಾಣಿ ವರ್ತಕರು ಹಾಗೂ ಇತರೆ ವ್ಯಾಪಾರಸ್ಥರು ದರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಮುಂದಾಗಿದ್ದು, ಬಡ ಜನರ ಹಾಗೂ ಕೂಲಿ ಕಾರ್ಮಿಕರ ಹಿತವನ್ನು ಕಾಪಾಡದೇ ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಮುಂದಾಗಿದ್ದು ಸಾರ್ವಜನಿಕರು ಎಚ್ಚೆತ್ತುಕೊಂಡು ಈಗಲೇ ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಬೇಕೆಂಬುದು ಉದಯ ವಾಹಿನಿಯ ಆಶಯವಾಗಿದೆ.