ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ರಾಜ್ಯದಲ್ಲಿ ಮೊದಲ ಹಂತದಲ್ಲಿ 15 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೊಳಿಸಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ 15 ದಿನ ಎಲ್ಲವೂ ಬಂದ್ ಮಾಡಲು ಸರಕಾರ ಆದೇಶ ಹೊರಡಿಸಿ. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಸಮಯ ನಿಗದಿ ಮಾಡಿದೆ. ಜನ ಗುಂಪು ಸೇರದಂತೆ ಸಾಮಾಜಿಕ ಅಂತರ ಕಾಪಾಡಿ ಕರೋನ ನಿಯಮ ಪಾಲಿಸಿ ವ್ಯಾಪಾರ ಮಾಡಲು ಸೂಚನೆ ನೀಡಿದೆ.ಆದರೆ ಮುದಗಲ್ ಪಟ್ಟಣದ ತರಕಾರಿ ಮಾರುಕಟ್ಟೆ ಜನಜಂಗುಳಿ ಪ್ರದೇಶವಾಗಿದ್ದರು ಕೂಡ ಮಾರುಕಟ್ಟೆ ವಿಂಗಡಣೆ ಮಾಡದೇ ಪುರಸಭೆ ಮುಖ್ಯಾಧಿಕಾರಿಗಳು ನಿರ್ಲಕ್ಷವಹಿಸಿದ್ದರು. ಆದರೆ ಬುಧವಾರ ಪಟ್ಟಣಕ್ಕೆ ಆಗಮಿಸಿದ ಲಿಂಗಸಗೂರು ತಹಸೀಲ್ದಾರ್ ನಾಗು ಪ್ರಸಾದ್ ತರಕಾರಿ ಮಾರುಕಟ್ಟೆ ಸ್ಥಳ ವೀಕ್ಷಣೆ ಮಾಡಿ ಪುರಸಭೆ ಅಧಿಕಾರಿಗಳಿಗೆ ಮಾರುಕಟ್ಟೆ ಸ್ಥಳಾಂತರ ಮಾಡಿ ಎಂದು ಸೂಚನೆ ನೀಡಿದರು. ಬಳಿಕ ನಿದ್ರೆ ಯಿಂದ ಇಚ್ಛೆತ ಪುರಸಭೆ ಸಿಬ್ಬಂದಿಗಳು ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿದ್ದಾರೆ.
1)ಮೇಗಳಪೇಟೆಯಲ್ಲಿ ಜ್ಞಾನೇಶ್ವರ ದೇವಸ್ಥಾನದ ಮುಂಭಾಗ,
2)ಕಿಲ್ಲಾದ ನಾನಾ ದರ್ಗಾ, ಹುಸೇನ್ ಪಾಷಾ ಚಮ್ಮನ್ ಕಟ್ಟೆ
3)ಚೌಡಿಕಟ್ಟೆ
4)ಆಂಜನೇಯ ದೇವಸ್ಥಾನ ವೆಂಕಟರಾಯಣ ಪೇಟೆ
5) ಬೇಗಂಪುರದ ಮೌಲಾಲಿ ದರ್ಗಾ
6) ಗುಡಿಸಾಲಿ ಆವರಣದ ಒಳಗೆ
7) ಹಳೇಪೇಟೆ ಐದು ಗುಡಿ ಹತ್ತಿರ
8) ಹಳೇಪೇಟೆ ಕೆರೆ ಹತ್ತಿರದ ಕಟ್ಟೆ
9) ಮೆಸ್ತಿ ಪೇಟೆಯ ಶೀಲವಂತಮ್ಮ ಗುಡಿ
10) ಲಿಂಗಸಗೂರು ರಸ್ತೆಯ ಬನ್ನಿಕಟ್ಟೆ
11) ಲಿಂಗಸಗೂರು ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ
12) ಪೋಸ್ಟ್ ಆಫೀಸ್ ಹತ್ತಿರ ಖಾದ್ರಿಯ ಕಾಲೋನಿ
ಎನ್ನುವುದಾಗಿ ತರಕಾರಿ ವ್ಯಾಪಾರ ಸ್ಥಳಗಳನ್ನು ಪುರಸಭೆ ಸೂಚಿಸಿದ್ದು. ತರಕಾರಿ ವ್ಯಾಪಾರಸ್ಥರು ಒಂದು ಸ್ಥಳದಲ್ಲಿ 4-5 ಜನ ಕರೋನ ನಿಯಮ ಪಾಲಿಸಿ ವ್ಯಾಪಾರ ಮಾಡಬಹುದಾಗಿದೆ. ಈ ಸೂಚನೆ ಪಾಲಿಸಿದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.