Friday , September 20 2024
Breaking News
Home / Breaking News / ಗುಡ್ಡದ ಹನುಮಸಾಗರದಲ್ಲಿ ಗುಂಪು ಗಲಾಟೆ 55 ಜನರ ವಿರುದ್ದ ಪ್ರಕರಣ ದಾಖಲು..!

ಗುಡ್ಡದ ಹನುಮಸಾಗರದಲ್ಲಿ ಗುಂಪು ಗಲಾಟೆ 55 ಜನರ ವಿರುದ್ದ ಪ್ರಕರಣ ದಾಖಲು..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕೋವಿಡ್ ನಿಯಮ ಉಲ್ಲಂಘನೆ ಹಾಗೂ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಮೀಪದ ಗುಡ್ಡದ ಹನುಮಸಾಗರದಲ್ಲಿ 2 ಗುಂಪುಗಳ ಮಧ್ಯೆ ಗಲಾಟೆ ಯಾಗಿದ್ದು ಒಟ್ಟು 55 ಜನರ ಮೇಲೆ ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಗುಡ್ಡದ ಹನುಮಸಾಗರದಲ್ಲಿ ಮದುವೆಯ ಮೆರವಣಿಗೆಯ ಘಟನೆಗೆ ಸಂಬಂಧಿಸಿದಂತೆ ಹಳೇ ವೈಷಮ್ಯದ ಹಿನ್ನಲೆಯಲ್ಲಿ ಗ್ರಾಮದಲ್ಲಿ 2 ಬಣಗಳಾಗಿ ಗುಂಪು ಗಲಾಟೆ ಯಾಗಿದ್ದು, ಕೊಲೆ ಬೆದರಿಕೆ ಜೊತೆಗೆ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಬಣಗಳ ನಡುವೆ ಒಟ್ಟು 55 ಜನರ ವಿರುದ್ದ ಪ್ರಖರಣ ದಾಖಲಾಗಿದ್ದು ಗ್ರಾಮದಲ್ಲಿ ಸದ್ಯ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದ್ದು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ .
ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ಆರ್, ಸ್ಥಳೀಯ ಠಾಣಾ ಪಿಎಸ್ಐ ಗೀತಾಂಜಲಿ ಶಿಂಧೆ ಹಾಗೂ ಸಿಬ್ಬಂದಿ ವರ್ಗ ಭೇಟಿನೀಡಿ ಆರೋಪಿಗಳ ವಿರುದ್ದ ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

One comment

  1. Fake photo

    • Not visited CPI Ningappa
error: Content is protected !!