ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಏಪ್ರಿಲ್ 27 ರ ರಾತ್ರಿ 9 ರಿಂದ ಮೇ 12 ರ ಬೆಳಿಗ್ಗೆ 6 ಗಂಟೆಯವರೆಗೆ 14 ದಿನಗಳ ಕಾಲ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಆಗುವುದರಿಂದ ಪಟ್ಟಣದ ಜನರಲ್ಲಿ ಆತಂಕ ಮೂಡಿದ್ದು ಸಂಪೂರ್ಣವಾಗಿ ವ್ಯಾಪಾರ ವಹಿವಾಟುಗಳು ಸ್ಥಗಿತ ಗೊಳ್ಳುವದರಿಂದ ಆರ್ಥಿಕ ಹೊರೆ ಬೀಳುವ ಜೊತೆ ಜೀವನ ನಡೆಸುವುದು ಕೂಡ ಕಷ್ಟದಾಯಕವಾಗಿದೆ. ದಿನ ನಿತ್ಯ ಕೂಲಿ ಮಾಡಿ ಬದುಕುವ ಜನರ ಬದುಕು ಕರೊನಾ ಕರಿ ನೆರಳಿನಿಂದಾಗಿ ಸಂಕಷ್ಟಕ್ಕಿಡಾಗಿದೆ.
ಯಾವ ಸೌಲಭ್ಯಗಳು ಸಿಗುತ್ತದೆ ಎಂಬ ಖಚಿತ ಮಾಹಿತಿ ಕೂಡ ಕೆಲವರಿಗೆ ಇನ್ನು ತಿಳಿಯದಂತಾಗಿದೆ.
ಕಳೆದ ವರ್ಷ ಕೂಡ ಕರೊನಾ ದಿಂದ ಕಂಗಾಲಾಗಿದ್ದ ಜನತೆ ಈ ಬಾರಿಯೂ ಕೂಡ ಅದೇ ಪರಿಸ್ಥಿತಿ ಎದಿರುಸುವಂತಾಗಿರುವುದು ದುರಾದೃಷ್ಟಕರ. ಕರೊನಾ ಜೊತೆ ಜೊತೆಗೆ ಜೀವನ ನಡೆಸುವುದು ಅನಿವಾರ್ಯವಾಗಿದ್ದು ಆದಷ್ಟು ಜನರು ಸಾಮಜಿಕ ಅಂತರ ಕಾಪಾಡಿಕೊಳ್ಳುವದರ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಬಳಸುವದರೊಂದಿಗೆ ಕರೊನಾ ಮಹಾಮಾರಿ ಹೋಗಲಾಡಿಸಬೇಕೆಂಬುದು ಉದಯ ವಾಹಿನಿಯ ಆಶಯವಾಗಿದೆ.