ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಕರೊನಾ ವೀಕೆಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ 10 ಗಂಟೆ ನಂತರ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದು ಮಾಡಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರಿಂದ ಪಟ್ಟಣದ ಎಲ್ಲಾ ಕಡೆ ಜನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದು ಈ ವರ್ಷದ ಪ್ರಥಮ ವೀಕೆಂಡ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ಕೂಡ ಪೊಲೀಸ್, ಕಂದಾಯ, ಪಟ್ಟಣ ಪಂಚಾಯತ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರಿಂದಾಗಿ ಸಾರ್ವಜನಿಕರು ಕೂಡ ಅಂಗಡಿಗಳನ್ನು ಬಂದ ಮಾಡುವ ಮೂಲಕ ಸಹಕಾರ ನೀಡಿದ್ದು ಪಟ್ಟಣದಲ್ಲಿ ಕಂಡು ಬಂದಿದೆ.
ಸಾರ್ವಜನಿಕರಲ್ಲಿ ಗೊಂದಲ: ವೀಕೆಂಡ್ ಲಾಕ್ ಡೌನ್ ನಲ್ಲಿ ಸಾರ್ವಜನಿಕರಿಗೆ ಯಾವ ಯಾವ ಸೇವೆಗಳು ಲಭ್ಯವಿದೆ ಮತ್ತು ಯಾವ ಸಮಯದಲ್ಲಿ ಅಗತ್ಯ ವಸ್ತುಗಳು ಖರೀದಿ ಮಾಡಬೇಕೆಂಬುದರ ಗೊಂದಲದಲ್ಲಿ ಸಾರ್ವಜನಿಕರಿದ್ದು ಈ ಬಗ್ಗೆ ಸಂಭಂದಿಸಿದ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಟ್ಟು ಗೊಂದಲ ನಿವಾರಿಸಿ ಕೊಡಬೇಕೆಂದು ಪಟ್ಟಣದ ಜನರ ಆಶಯವಾಗಿದೆ.