ಉದಯವಾಹಿನಿ :
ಕವಿತಾಳ
ಪಟ್ಟಣ ಸಮೀಪದ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಮ್ ರಾಮಲದಿನ್ನಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಆಕಳು ಮತ್ತು ಕರು ಸಾವನ್ನಪ್ಪಿದ ಘಟನೆ ನಡೆದಿದೆ.
ಕರಿಯಪ್ಪ ನಾಯಕ ರವರ ಆಕಳು ಮತ್ತು ಕರು ಗುಡುಗು ಸಿಡಿಲು ಮಳೆಗೆ ಮನೆಯ ಮುಂದೆ ಕಟ್ಟಿದ್ದ ಆಕಳು ಮತ್ತು ಕರು ಸಿಡಿಲು ಹೊಡೆತಕ್ಕೆ ಸಾವನ್ನಪ್ಪಿವೆ , ಆಕಳು ಮತ್ತು ಕರು ಯಜಮಾನ ಕರಿಯಪ್ಪ ನಾಯಕ ರವರು ದಿನಾಲು 200 ರೂಪಾಯಿ ಹಾಲು ಮಾರಾಟ ಮಾಡಿ ಜೀವನ ಮಾಡುತ್ತಿದ್ದರು, ಹಾಗೆ ಆಕಳು 40000 ರೂಪಾಯಿ ಕೊಟ್ಟು ಖರೀದಿಗೆ ತಂದಿದ್ದರು ಇದರಿಂದ ತೀವ್ರ ತೊಂದರೆಗೆ ಒಳಗಾಗಿದ್ದಾರೆ, ಅದಕ್ಕಾಗಿ ಸರಕಾರದಿಂದ ಏನಾದರೂ ಸಹಾಯ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ, ಸ್ಥಳಕ್ಕೆ ಗ್ರಾಮ ಲೆಕ್ಕಾದಿಕಾರಿ ಅಬುಬೂಕರ , ಪಶು ವೈದ್ಯರಾದ ಡಾ.ಜಯರಾಜ, ಕವಿತಾಳ ಪೊಲಿಸ್ ಠಾಣಿ ಸಿಬ್ಬಂದಿ ಬೇಟಿ ನೀಡಿದ್ದಾರೆ .
Check Also
ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …