ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ ವಸತಿ ರಹಿತ ನಿವಾಸಿಗಳಿಗೊಂದು ಒಂದು ಸಿಹಿ ಸುದ್ದಿ..! ಪಟ್ಟಣದಲ್ಲಿರುವ ವಸತಿ ರಹಿತ ಕುಟುಂಬಗಳು ಇಲ್ಲಿಯವರೆಗೆ ವಸತಿಗಾಗಿ ಬಾಡಿಗೆ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಿದ್ದಾಗಿದೆ. ಆದರೆ, ಪಟ್ಟಣದಲ್ಲಿರುವ ವಸತಿ ರಹಿತ ಕುಟುಂಬಗಳಿಗೆ ಇನ್ನೂ ವಸತಿಗಾಗಿ ಪಟ್ಟಣ ಪಂಚಾಯಿತಿಯವರು ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ನಾರಿನಾಳ ರಸ್ತೆಯ ‘ಸಿದ್ಧಶ್ರೀ’ ನಗರದ ಹಿಂಭಾಗದಲ್ಲಿ ಸ.ನಂ 434/1 ಹಾಗೂ 434/4 ಒಟ್ಟು 9 -18 ಎಕರೆ ಜಮೀನಿನಲ್ಲಿ ಪ್ಲಾಟಗಳನ್ನು ಒದಗಿಸುವುದಕ್ಕಾಗಿ ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ಸೂಕ್ತ ದಾಖಲಾತಿಗಳೊಂದಿಗೆ 10-05-2021 ರೊಳಗಾಗಿ ಅರ್ಜಿ ಸಲ್ಲಿಸಲು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ವಿಕ್ರಮ ರಾಯ್ಕರ್ ಹಾಗೂ ಮುಖ್ಯಾಧಿಕಾರಿ ಶಂಕರ ಕಾಳೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.