ವರದಿ ಎನ್ ಶಾಮೀದ್ ತಾವರಗೇರಾ
ಕುಷ್ಟಗಿ: ತಾಲೂಕಿನಾದ್ಯಂತ ಲಾಕ್ ಡೌನ್ ಆಗುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿದ್ದು, ಇದನ್ನೇ ಬಳಕೆ ಮಾಡಿಕೊಂಡ ಕಿರಾಣಿ ವರ್ತಕರು ದಿನಸಿ ಪದಾರ್ಥಗಳು ಸೇರಿದಂತೆ ಪ್ರತಿಯೊಂದು ವಸ್ತುವಿನ ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವದಾಗಿ ಗ್ರಾಹಕರು ಆರೋಪಿಸುತ್ತಿದ್ದಾರೆ.
ಈಗಾಗಲೇ ಕರೊನಾ ವೈರಸ್ ಹರಡುತ್ತಿರುವ ಭೀತಿಯಲ್ಲಿರುವ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದಂತಾಗುತ್ತಿದೆ, ಕರೊನಾ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ ಡೌನ್ ಘೋಷಿಸುವ ಮುನ್ನವೇ ತಾಲೂಕಿನ ವ್ಯಾಪಾರಸ್ಥರು ಮೂಲ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವದಲ್ಲದೇ ಸ್ಟಾಕ್ ಇಲ್ಲವೆಂಬಂತೆ ಸಿದ್ದ ಉತ್ತರ ನೀಡುತ್ತಿದ್ದಾರೆ. ಕಳೆದ ವರ್ಷ ಲಾಕ್ ಡೌನ್ ಸಂಧರ್ಬದಲ್ಲಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿ ರುಚಿ ಕಂಡಿರುವ ವ್ಯಾಪಾರಿಗಳು, ಇದೇ ಸಂಧರ್ಬವನ್ನು ಬಳಸಿ ಕೊಂಡಿರುವ ವ್ಯಾಪಾರಸ್ಥರು ಬಡ ಜನರ ಹಣ ಸುಲಿಗೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಜನಪರ ಕಾಳಜಿಯುಳ್ಳ ಅಧಿಕಾರಿಗಳು ಕೂಡಲೇ ಗ್ರಾಹಕರ ಹಿತ ಕಾಪಾಡಿ ಬಡ ಜನರ ಮನವಿಗೆ ಸ್ಫಂದಿಸುವಂತೆ ಒತ್ತಾಯಿಸಿದ್ದಾರೆ.