Friday , November 22 2024
Breaking News
Home / Breaking News / ಸಾರಿಗೆ ನೌಕರರ ಕುಟುಂಬಗಳು ಬೀದಿಗೆ ಬಿದ್ದಿವೆ : ಸಿದ್ದಲಿಂಗಪ್ಪ

ಸಾರಿಗೆ ನೌಕರರ ಕುಟುಂಬಗಳು ಬೀದಿಗೆ ಬಿದ್ದಿವೆ : ಸಿದ್ದಲಿಂಗಪ್ಪ

 

ವರದಿ :  ನಾಗರಾಜ್ ಎಸ್ ಮಡಿವಾಳರ್

 

ಮುದಗಲ್ : ಸಮೀಪದ ನಾಗರಹಾಳ ಗ್ರಾಮದಲ್ಲಿ  ಸಾರಿಗೆ ನೌಕರರು ಮೇಣದ ಬತ್ತಿ ಬೆಳಗುವ ಮೂಲಕ ರಾಜ್ಯ ಸರ್ಕಾರ ತಮ್ಮ ಬೇಡಿಕಡಗಳನ್ನ ಈಡೇರಿಸಬೇಕು ಎಂದು ಶಾಂತಿಯುತವಾಗಿ ಮನವಿ ಮಾಡಿಕೊಂಡಿರು.ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ನೌಕರ ಸಿದ್ದಲಿಂಗಪ್ಪ
ಈ ಹಿಂದೆ ಡಿಸೆಂಬರ್ ತಿಂಗಳಲ್ಲಿ ಮುಷ್ಕರ ಮಾಡಿದ್ದ ನಾವು ಸರಕಾರದ ಮುಂದೆ ಹಲವು ಬೇಡಿಕೆ ಗಳನ್ನು ಇಟ್ಟಿದೆವು ಆದರೆ ಸರ್ಕಾರ ಸಾರಿಗೆ ನೌಕರರಿಗೆ 9 ಭರವಸೆಗಳನ್ನು ನಿಡಿತ್ತು.
1) ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ, 2) ಕೋವಿಡ್ 19 ನಿಂದ ಸಾವಿಗೀಡಾದ್ರೆ 30 ಲಕ್ಷ ಪರಿಹಾರ‌, 3) ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆ,4) ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ, 5) ನಿಗಮಗಳಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ತರುವುದು, 6) ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ತೀರ್ಮಾನ, 7) ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿ,
8) ಎನ್ಐ ಎನ್ ಐಎನ್ಸಿ ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ, 9) ವೇತನ ಪರಿಷ್ಕರಣೆ ಸಂಬಂಧಿಸಿದಂತೆ 6ನೇ ವೇತನ ಆಯೋಗ ಶಿಫಾರಸು ಪರಿಗಣನೆ ( ಸರ್ಕಾರದ ಆರ್ಥಿಕ ಅಂಶ ಪರಿಗಣಿಸಿ ತೀರ್ಮಾನ) ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದ ಸರ್ಕಾರ ಆ ಬೇಡಿಕೆಗಳನ್ನು ಇನ್ನೂ ಈಡೇರಿಸದ ಹಿನ್ನೆಲೆಯಲ್ಲಿ ಮಾತು ತಪ್ಪಿದ ಸರ್ಕಾರದ ವಿರುದ್ಧ ನಾವು ರಾಜ್ಯಧಾನಿಯಲ್ಲಿ ಹಾಗೂ ರಾಜ್ಯದ್ಯಾದಂತ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು ಆದರೆ ಮುಖ್ಯವಾಗಿ ಆರನೇ ವೇತನ ಆಯೋಗ ಜಾರಿಯಾಗಿಲ್ಲ. ಈಗಾಗಲೇ 9 ದಿನಗಳಿಂದ ಪ್ರತಿಭಟನೆ ಆರಂಭಿಸಿರುವ ನಾವು ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಕಡೆಗೆ ಗಮನಹರಿಸಿಲ್ಲ ಹೀಗಾಗಿ, ಮತ್ತೆ ಮುಷ್ಕರ ಮುಂದುವರೆದಿದೆ. ಈ ಪರಿಣಾಮ ಸಾರಿಗೆ ನೌಕರರ ಕುಟುಂಬಗಳು ಬೀದಿಗೆ ಬಿದ್ದಿವೆ ಲೋಟ ತಟ್ಟೆ ಭಾರಿಸುವ ಮೂಲಕ ಲಿಂಗಸಗೂರು ತಹಸೀಲ್ದಾರ್ ರಿಗೆ ಮಾಡಿದ್ದೇವೆ. ಸರ್ಕಾರ ಸಾರಿಗೆ ನೌಕರಿಗೆ ಮಾರ್ಚ್ ತಿಂಗಳ ವೇತನವನ್ನು ಸಹ ನೀಡಿಲ್ಲ. ರಾಜ್ಯದ ಜನರು ಸಂತೋಷದಿಂದ ಯುಗಾದಿ ಹಬ್ಬವನ್ನು ಆಚರಿಸಿದರೆ ನಾವೂ ಮಾತ್ರ ಭೀಕ್ಷೆ ಬೇಡುತ್ತಿದ್ದೇವೆ. ಕೂಡಲೇ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು 6ನೇ ವೇತನ ಜಾರಿಗೊಳಿಸಬೇಕು ಎಂದು ಮೇಣದ ಬತ್ತಿ ಹಿಡಿದು ಸರ್ಕಾರಕ್ಕೆ ಮನವಿ ಮಾಡಿದರು.

 

 

 

 

 

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!