ವರದಿ ಎನ್ ಶಾಮೀದ್ ತಾವರಗೇರಾ
ಮಸ್ಕಿ: ರಾಜ್ಯ ರಾಜಕಾರಣದಲ್ಲಿಯೇ ಹೈವೊಲ್ಟೇಜ್ ಕ್ಷೇತ್ರವೆಂದೆ ಕರೆಸಿಕೊಳ್ಳುವ ಮಸ್ಕಿ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಕೇವಲ ನಾಲ್ಕು ದಿನಗಳ ಮಾತ್ರ ಉಳಿದಿದ್ದು ಕ್ಷೇತ್ರದ ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆಡಳಿತರೂಡ ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರೆಲ್ಲರು ಕ್ಷೇತ್ರದಲ್ಲಿ ಬಿಡುಬಿಟ್ಟು ಪ್ರಚಾರ ನಡೆಸಿರುವುದು ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದರೇ, ಇತ್ತ ಕಾಂಗ್ರೆಸ್ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಘಟಾನುಘಟಿಗಳು ಅಭ್ಯರ್ಥಿ ಆರ್ ಬಸನಗೌಡ ತುರುವಿಹಾಳ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದು ಬಿಜೆಪಿ ಯವರಿಗೆ ಅಧಿಕಾರದ ಬಲ ಪ್ಲಸ್ ಪಾಯಿಂಟ್ ಆಗಿದ್ದು ಗೆಲ್ಲುವ ಉತ್ಸಾಹದಲ್ಲಿದ್ದಾರೆ, ಇತ್ತ ಕಾಂಗ್ರೆಸ್ ಅಭ್ಯರ್ಥಿ ಪರ ಕ್ಷೇತ್ರದಲ್ಲಿ ಅನುಕಂಪದ ಅಲೆ ಕೇಳಿಬರುತ್ತಿದ್ದು ಜೊತೆಗೆ ಕೆಲ ಹಳ್ಳಿಗಳಲ್ಲಿ ಪ್ರತಾಪಗೌಡ ರ ವೀರೊಧಿ ಅಲೆ ಕಂಡು ಬರುತ್ತಿರುವದಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಒಟ್ಟಿನಲ್ಲಿ ಕ್ಷೇತ್ರದ ಮತದಾರರು ಆಡಳಿತ ಪಕ್ಷಕ್ಕೆ ಮುನ್ನುಡಿ ಬರೆಯುತ್ತಾರೊ ಅಥವಾ ಅನುಕಂಪದ ಅಲೆಗೆ ಮನ್ನಣೆ ನೀಡುತ್ತಾರೆಂಬುದು ಕಾದು ನೋಡಬೇಕು.