ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆರ್ ಬಸನಗೌಡ ತುವಿರ್ಹಾಳ ಬಹುಮತ ಅಂತರದಿಂದ ಜಯಭೇರಿಗಳಿಸಲಿದ್ದಾರೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪಟ್ಟಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ಇಲ್ಲಿಯ ಖಾಸಗಿ ಹೋಟಲ್ ಒಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಮೋಸದ ರಾಜಕಾರಣ ಮಾಡುತ್ತಿದ್ದಾರೆ. ಮತದಾರರಿಗೆ ಹಣದ ಆಮಿಷ್ಯಒಡ್ಡುತ್ತಿದ್ದಾರೆ.
ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆಯಾಗುತ್ತದೆ ಎಂದು ಬಿಜೆಪಿಯವರ ವಿರುದ್ಧ ಕಿಡಿ ಕಾರಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೆವಾಲ್, ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ, ಬಿ ವಿ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ಮಾಜಿ ಸಚಿವ ಎಂಮಲ್ಲಿಕಾರ್ಜುನ ನಾಗಪ್ಪ, ಬಸವರಾಜ ರಾಯರಡ್ಡಿ, ಹಂಪನಗೌಡ ಬಾದರ್ಲಿ, ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಡಿ ಎಸ್ ಹೂಲಗೇರಿ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ದೇವೆಂದ್ರಪ್ಪ ಬಳೂಟಗಿ, ಮುಕ್ಕಂದರಾವ್ ಭವಾನಿಮಠ ಸೇರಿದಂತೆ ಸ್ಥಳಿಯ ಕಾಂಗ್ರೇಸ್ ಮುಖಂಡರು ಹಾಗೂ ಇನ್ನಿತರ ಗಣ್ಯರು ಇದ್ದರು.
ನಂತರ ಮಸ್ಕಿ ವಿಧಾನಸಭೆಯ ಉಪ
ಚುನಾವಣೆಯ ಕಾಂಗ್ರೇಸ್ ಅಭ್ಯರ್ಥಿ ಆರ್.
ಬಸನಗೌಡ ತುರ್ವಿಹಾಳ ಪರ ಪ್ರಚಾರಾರ್ಥವಾಗಿ
ಉಮಲೂಟಿ ಮಾರ್ಗವಾಗಿ ತುರ್ವಿಹಾಳ, ಸಿಂಧನೂರ
ಕಡೆ ಪ್ರಯಾಣ ಬೆಳೆಸಿದರು.