ವರದಿ ಎನ್ ಶಾಮೀದ್ ತಾವರಗೇರಾ
ಯಲಬುರ್ಗಾ : ವಿಧಿಯಾಟ ವಿಚಿತ್ರ ಅಂದರೆ ತಪ್ಪಾಗಲಾರದು. ಇಂತಹ ವಿಚಿತ್ರ ವಿಧಿಯಾಟವು ತಾಲೂಕಿನ ಮಂಡಮರಿ ಗ್ರಾಮದಲ್ಲಿನ ಜೂಲಕಟ್ಟಿ ಕುಟುಂಬದಲ್ಲಿ ಜರುಗಿ ಹೋಗಿದೆ..!
04-04-2021 ರಂದು ಶರಣಪ್ಪ ಮರಿಯಪ್ಪ ಜೂಲಕಟ್ಟಿ (42) ಮನನೊಂದು ಆತ್ಮಹತ್ಯೆ ಮಾಡಿಕೊಂಡು ಕುಟುಂಬ ಸೇರಿದಂತೆ ಇಡೀ ಗ್ರಾಮವನ್ನು ಸ್ಮಶಾನ ಮೌನಕ್ಕೆ ಕಾರಣವಾಗಿದ್ದ , ಇತನ ಸಾವಿನಿಂದ ಕುಟುಂಬದ ಸದಸ್ಯರಿಗೆ ದಿಕ್ಕು ದೊಚದಂತಾಗಿ ಕೈ ಚೆಲ್ಲಿ ಕುಳಿತುಕೊಂಡಿದ್ದರು. ಯುವಕನ ಸಾವಿನ ಸುದ್ದಿ ಮಾಸುವ ಮುನ್ನ ಹಾಗೂ ಇತನ ಸಾವಿನ ಹಿನ್ನಲೆಯಲ್ಲಿ ಹಚ್ಚಿದ ನಂದಾ ದೀಪ ಶಾಂತವಾಗುವುದರೊಳಗಾಗಿಯೇ ಅಂದರೇ, ಕೇವಲ 12 ಗಂಟೆಗಳೊಳಗಾಗಲೇ ಇತನ ಹಿಂದೆ ಜನ್ಮ ತಾಳಿದ ಸೋಹದರ ಭರಮಪ್ಪ ಮರಿಯಪ್ಪ ಜೂಲಕಟ್ಟಿ (40) ಎಂಬಾತನ ಮೈ ಮೇಲೆ ಲಾರಿ ಹರಿದು ಹೋಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ವಿಧಿಯು ಇಬ್ಬರು ಸಹೋದರರನ್ನು ಬಲಿ ಪಡೆದಿದೆ. ಒಂದೇ ಕುಟುಂಬದ ಇಬ್ಬರು ಸಹೋದರರು ಏಕಾ ಏಕೀ ಸಾವನ್ನಪ್ಪಿರುವುದು ಕುಟುಂಬದ ಸದಸ್ಯರಿಗೆ ದುಃಖ ಮರೆಯದಂತಾಗಿದೆ. ಸಾವಿನ ಸರಣಿಯಿಂದ ಕುಟುಂಬವು ನೊಂದುಹೋಗಿದೆ. ನೊಂದ ಕುಟುಂಬಕ್ಕೆ ಶಾಂತಿ ಜೊತೆಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಬೇಕಾಗಿದೆ..!!