ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ರಾಜಕಾರಣದಲ್ಲಿ ಕನಕಪುರದ ಬಂಡೆ ಎಂದು ಖ್ಯಾತಿ ಹೊಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಇಂದು ಡಿಮ್ ಆಗಿರುವುದು ಕಂಡು ಬಂದಿತು..!
ಜಿಲ್ಲೆಯ ತಾವರಗೇರಾ ಪಟ್ಟಣದಲ್ಲಿ ಮಸ್ಕಿ ಉಪ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಹೇಲಿಪ್ಯಾಡನಿಂದ ಇಳಿದು, ಮಾಧ್ಯಮದವರಿಗೆ ಯಾವುದೇ ತರಹದ ಪ್ರತಿಕ್ರಿಯೆ ನೀಡದೆ ಕಾರನ್ನೇರಿದ್ದಲ್ಲದೆ, ಮಧ್ಯಮದವರು ಎಷ್ಟು ಒತ್ತಾಯಪಡಿಸಿದರು ಪ್ರತಿಕ್ರಿಯಿಸದೆ ಇದ್ದದ್ದನ್ನು ಗಮನಿಸಿದವರು “ಡಿ.ಕೆ.ಶಿ ಫುಲ್ ಡಿಮ್” ಆಗಿದ್ದಾರೆ ಎಂಬ ಮಾತಗಳನ್ನಾಡಿದ್ದು ಕೇಳಿಸಿಬಂದಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಉಪಸ್ಥಿತಿ ಮಧ್ಯದಲ್ಲಿಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಸಂತ್ರಸ್ಥ ಮಹಿಳೆ ಹಾಗೂ ಸಿಡಿ ಪ್ರಕರಣದಲ್ಲಿ ತಪ್ಪಿಸ್ಥರು ಯಾರೇ ಆಗಿರಲಿ ಅವರಿಗೆ ಶಿಕ್ಷೆ ಆಗಬೇಕು ಎಂಬ ಖಡಕ್ ಮಾತುಗಳು ಮಾತ್ರ ಉಪಸ್ಥಿತರಿದ್ದವರ ಮನಸ್ಸಿಗೆ ನಟ್ಟಂತಿದ್ದವು..!!