ಉದಯವಾಹಿನಿ :
ಕವಿತಾಳ :-
ಪಟ್ಟಣ ಸಮೀಪದ ಅಮೀನಡ ಗ್ರಾಮದ ನೂರಾರು ಭಕ್ತರು ಕಾಲ್ನಡಿಗೆಯಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹುಣ್ಣಿಮೆ ಮುಗಿದ ಮೇಲೆ ಕಾಲ್ನಡಿಗೆಯಿಂದ ಶ್ರೀ ಶೈಲಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಾರೆ
ಭಕ್ತರು ಹರಕೆ ಹೊತ್ತು ಪ್ರತಿ ವರ್ಷ ಶ್ರದ್ಧೆ – ಭಕ್ತಿಯಿಂದ ಪಾದಯಾತ್ರೆ ಮೂಲಕ ಶ್ರೀ ಶೈಲಕ್ಕೆ ತೆರಳಿ ದರ್ಶನ ಪಡೆಯುತ್ತಿದ್ದು. ತಮ್ಮ ಇಷ್ಟಾರ್ಥಗಳೆಲ್ಲ ಈಡೇರುತ್ತವೆ ಎಂಬ ನಂಬಿಕೆಯಿಟ್ಟಿದ್ದಾರೆ. ಧಾರ್ಮಿಕತೆ ನಂಬಿಕೆಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರನ್ನು ಆ ಭಗವಂತ ಮಲ್ಲಿಕಾರ್ಜುನ ಕುಣಿಸುತ್ತಾನೆ ಎಂದು ಹೇಳಿದರು