ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಸಿಗುವವರೆಗೂ ನಿರಂತರ ಹೋರಾಟ ನಡೆಸಲಾಗುವದು, ನಮ್ಮದು ಏನಿದ್ದರು “ಮಾಡು ಇಲ್ಲವೇ ಮಡಿ” ಹೋರಾಟ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ: ವಿಜಯಾನಂದ ಕಾಶಪ್ಪನವರ ಹೇಳಿದರು.
ಅಚರು ಪಟ್ಟಣದ ಪಂಚಾಕ್ಷರಿ ಸಮುದಾಯ ಭವನದಲ್ಲಿ ನಡೆದ ಸ್ಥಳೀಯ ಸಮಾಜದವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದ “ಶರಣು ಶರಣಾರ್ಥಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಬಲೀಕರಣವಾಗಬೇಕಾದರೆ ಮೀಸಲಾತಿ ಅವಶ್ಯಕ, ಮುಖ್ಯಮಂತ್ರಿಗಳ ಭರವಸೆ ಹಿನ್ನಲೆಯಲ್ಲಿ ಹೋರಾಟ ಹಿಂದಕ್ಕೆ ಪಡೆಯಲಾಗಿದೆ. ನಮಗೆ ನ್ಯಾಯ ಸಿಗದಿದ್ದಲ್ಲಿ ಮತ್ತೆ ಸಪ್ಟೆಂಬರ್ 15 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಹೇಳಿದರು.
ನಂತರ ಸಾನಿಧ್ಯ ವಹಿಸಿದ್ದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ ಸಮಾಜದ ಒಳಿತಿಗಾಗಿ ಹೋರಾಟ ನಡೆಸಲಾಗುತ್ತಿದ್ದು ನಮ್ಮ ಹೋರಾಟಕ್ಕೆ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ವಿಜಯಾನಂದ ಕಾಶಪ್ಪನವರ ಸೇರಿದಂತೆ ಸಮಾಜದ ಬಂಧುಗಳು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದ್ದರಾಗಿಂದಾಗಿ 720 ಕಿಮೀ ಪಾದಯಾತ್ರೆ ಜೊತೆಗೆ ಸತ್ಯಾಗ್ರಹ ಯಶಸ್ವಿಯಾಗಲು ಸಾಧ್ಯವಾಯಿತು. ಆದ್ದರಿಂದ ಸಮಾಜದ ಬಂಧುಗಳಿಗೆ ಅಭಿನಂದನೆ ಸಲ್ಲಿಸಲು ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆಯಲ್ಲಿ ಬಿ ಎಸ್ ಪಾಟೀಲ್, ಅಮರೇಶ ನಾಗೂರ, ನಿರಂಜನ ಹಾಸನ, ವೀರಭದ್ರಪ್ಪ ನಾಲತವಾಡ, ಸಂಗಮೇಶ ಬಾದವಾಡಗಿ, ಶಂಭನಗೌಡ ಪಾಟೀಲ್, ಶೇಖರಪ್ಪ ಮುತ್ತೆನವರ, ಬಸವನಗೌಡ ಓಲಿ, ಅರುಣಕುಮಾರ ನಾಲತವಾಡ, ರಮೇಶ ತಿಮ್ಮಾಪೂರ, ಅಮರೇಶ ನಾಲತವಾಡ, ಮಂಜು ಚಿನ್ನಾಪೂರ, ಶಶಿಧರ ಪಾಟೀಲ್, ವಿಜಯಕುಮಾರ ಸಾಸ್ವಿಹಾಳ ಸೇರಿದಂತೆ ಸಮಾಜದ ಹಿರಿಯರು ಹಾಗೂ ಪಂಚ ಸೇನೆಯ ಪದಾಧಿಕಾರಿಗಳು ಹಾಗೂ ಹಿರಿಯರು ಉಪಸ್ಥಿತರಿದ್ದರು.