ಕವಿತಾಳ :
ಪಟ್ಟಣ ಸಮೀಪದ ತೋರಣದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ತೋರಣದಿನ್ನಿ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್ 19 ಕರೋನಾ ತಡೆಗಟ್ಟಲು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸುಮಾರು 30 ವಿದ್ಯಾರ್ಥಿಗಳು *ಕರೋನಾ ರೋಗ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ* ಎಂಬ ವಿಷಯದ ಕುರಿತು ಬಹಳಷ್ಟು ಮಾಹಿತಿಯನ್ನು ವಿದ್ಯಾರ್ಥಿಗಳು ಬರೆದಿದ್ದರು ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಪ್ರಥಮ ದ್ವಿತೀಯ ತೃತೀಯ ಬಹುಮಾನವನ್ನು ವಿತರಣೆ ಮಾಡಿ ಶಾಲೆಯ ಮುಖ್ಯೋಪಾಧ್ಯಾಯರಾದ. ಮಲ್ಲಪ್ಪ. ಹೆಚ್ ಅವರು ಮಾತನಾಡಿ ಕರೋನಾ ರೋಗ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು ಎಸ್ಎಂಎಸ್ ವಿಧಾನವನ್ನು ತಪ್ಪದೇ ಅನುಸರಿಸ ಬೇಕೆಂದರು ಎಸ್ ಅಂದರೆ – ಸಾಮಾಜಿಕ ಅಂತರ ಎಂ ಅಂದರೆ – ಮಾಸ್ಕ್ ಎಸ್ ಎಂದರೆ- ಸ್ಯಾನಿಟೈಸರ್ ಎಂದು ವಿವರಿಸಿ ಎಂದು ಮಕ್ಕಳಿಗೆ ತಿಳಿಸಿದರು.
ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತನಾಡಿದ ಕರೋನಾ ತಡೆಗಟ್ಟಲು ವಿದ್ಯಾರ್ಥಿಗಳು ತಮ್ಮ ಮನೆಯ ಹಿರಿಯರು ಹಾಗೂ ದೀರ್ಘಾವಧಿ ಕಾಯಿಲೆ ಎಂದು ಬಳಲುತ್ತಿರುವವರು ಪತ್ರ ತಪ್ಪದೇ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಕೊವಿಡ್ 19 ಲಸಿಕೆಯನ್ನು ಕೊಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೂ ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕರಾದ ಶ್ರೀ ಶ್ರೀನಿವಾಸ್ ಶ್ರೀ ಮಹಾಂತೇಶ ಕೋಟೆ ಆಶಾ ಕಾರ್ಯಕರ್ತೆ ಪುಟ್ಟು ಬಾಯಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು