ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ : ಟೊಮೊಟೊ ಬೆಲೆ ದಿಢೀರ್ ಕುಸಿತದಿಂದ ಆಕ್ರೊಶಗೊಂಡ ರೈತರು, ರಸ್ತೆಗೆ ಟೊಮೊಟೊ ಚೆಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೆಲವೊತ್ತು ಪ್ರತಿಭಟನೆ ನಡೆಸಿರುವ ಘಟನೆ ಗುರುವಾರ ಜರುಗಿದೆ. ಪಟ್ಟಣದ ಶ್ರೀಶ್ಯಾಮೀದ್ ಅಲಿ ದರ್ಗಾದ ಹತ್ತಿರ ಪ್ರತಿ ದಿನ ಬೆಳಿಗ್ಗೆ ತರಕಾರಿ ಖರೀದಿ ಮತ್ತು ಮಾರಾಟದ ಹಾರಾಜು ಪ್ರಕ್ರೀಯೆ ನಡೆಯುತ್ತಿದೆ. ಪ್ರತಿ ದಿನದಂತೆ ಗುರುವಾರ ಬೆಳಿಗ್ಗೆ ರೈತರು ಟೆಮೊಟೊವನ್ನು ಮಾರುಕಟ್ಟೆಗೆ ತಂದಿದ್ದಾರೆ. ಆದರೆ ತಂದಿದ್ದ ರೈತರು ಬೆಲೆ ಕೇಳಿ ಕುಸಿದು ಹೋದರು.
ಕೆಲವೊಬ್ಬರು ಬೇಕಾಬಿಟ್ಟಿಯಾಗಿ ಒಂದು ಬಾಕ್ಸ್ (25
ಕೆಜಿ) ಟೊಮೊಟೊ ಗೆ 10-15 ರೂ ಗಳಿಗೆ
ಮಾತ್ರ ಕೇಳ ತೊಡಗಿದರು. ಬೆಲೆ ಸಾಕಷ್ಟು
ಕಡಿಮೆಯಾಗಿದ್ದನ್ನು ಕಂಡು ಕೆಲವು
ರೈತರು ತಂದ ಟೊಮೊಟೊವನ್ನು
ರಸ್ತೆಗೆ ಸುರಿದರು. ಕೆಲ ತಿಂಗಳ ಹಿಂದೆ ಟೊಮೊಟೊ ಉತ್ತಮ ಬೆಲೆಗೆ ಮಾರಾಟವಾಗಿದ್ದವು. ಈಗ ಅನೇಕ
ರೈತರು ಟೊಮೊಟೊ ಬೆಳೆಯುತ್ತಿದ್ದು,
ಇದರಿಂದ ಪ್ರತಿ ದಿನಾಲು ಪಟ್ಟಣದ
ಮಾರುಕಟ್ಟೆಗೆ ಸಾಕಷ್ಟು ಟೊಮೊಟೊ
ಬರುತ್ತಿದೆ. ಇದರಿಂದ ಬೆಲೆ ಕುಸಿತಕ್ಕೆ ಕಾರಣವಾಗಿದೆ
ಎನ್ನಲಾಗುತ್ತಿದೆ.
ಟೊಮೊಟೊಗೆ ಒಳ್ಳೆ ಬೆಲೆ ಸಿಗಬಹುದು ಎಂಬ
ನಿರೀಕ್ಷೆಯಲ್ಲಿ ಪಟ್ಟಣ ಸೇರಿದಂತೆ ಈ ಭಾಗದ
ಅನೇಕ ರೈತರು ತಮ್ಮ ತೋಟಗಳಲ್ಲಿ
ಟೊಮೊಟೊ ಬೆಳೆ ಬೆಳೆಯಲು ಮೊರೆ
ಹೋಗಿದ್ದಾರೆ. ಕಳೆದ 10-15 ದಿನಗಳಿಂದ
ಟೊಮೊಟೊ ಗೆ ಉತ್ತಮ ಬೆಲೆಯೇ
ಸಿಗುತ್ತಿಲ್ಲ. ಕೆಲವು ತಿಂಗಳ ಹಿಂದೆ ಒಂದು ಬಾಕ್ಸ್
(25ಕೆಜಿ) ಟೊಮೊಟೊ ಗೆ 400-500 ರೂ ವರೆಗೆ
ಬೆಲೆ ಇತ್ತು. ಬರುಬರುತ್ತಾ ಬೆಲೆ
ಕಡಿಮೆಯಾಗಿತ್ತು. ಒಂದು ವಾರದಿಂದ ಒಂದು
ಬಾಕ್ಸ್ ಗೆ 40-50 ರಂತೆ ಮಾರಾಟವಾಯಿತು. ಇಂದು
ಬೆಲೆ ಸಾಕಷ್ಟು ಕುಸಿತಗೊಂಡಿರುವುದರಿಂದ
ರೈತರು ಕಂಗಲಾಗಿದ್ದೇವೆ ಎಂದು
ವಿಠಲಾಪೂರ ಗ್ರಾಮದ ಶೇಖರಪ್ಪ ರಡ್ಡಿ
ನೊಂದು ಹೇಳಿದರು.