ಉದಯ ವಾಹಿನಿ :
ಕವಿತಾಳ :
ಕ್ಷಯ ರೋಗ ಮುಕ್ತ ಸಮಾಜ ಮಾಡಲು ಪ್ರತಿಯೊಬ್ಬ ಸಾರ್ವಜನಿಕರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ವೈದ್ಯಾಧಿಕಾರಿ ಡಾ ಪರಶುರಾಮ ಸಿಂಗ್ ಹೇಳಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯರೋಗ ವಿಭಾಗ. ಕ್ಷಯರೋಗ ಘಟಕ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ತೋರಣದಿನ್ನಿ. ಮುಖಾಮುಖಿ ರಂಗ ಸಂಸ್ಥೆ ರಾಯಚೂರು. ಇವರ ಸಂಯುಕ್ತ ಆಶ್ರಯದಲ್ಲಿ ಜನತೆಗೆ ಕ್ಷಯರೋಗ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
2025ರ ಒಳಗೆ ಕ್ಷಯರೋಗ ಮುಕ್ತ ಭಾರತ ಮಾಡುವುದು ಇಲಾಖೆಯ ಹಾಗೂ ಸರಕಾರದ ಉದ್ದೇಶವಾಗಿದೆ ಅದಕ್ಕಾಗಿ ಕ್ಷಯರೋಗಿಗಳನ್ನು ಬೇಗನೆ ಪತ್ತೆ ಹಚ್ಚಿ ಬೇಗನೆ ಚಿಕಿತ್ಸೆಗೆ ಒಳಪಡಿಸುವುದು ಹಾಗೂ ಸಂಪೂರ್ಣವಾಗಿ ಗುಣಮುಖರಾಗಿ ಮಾಡುವ ಉದ್ದೇಶವಾಗಿದೆ ಎಂದು ಹೇಳಿದರು
ನಂತರ ಕಿರಿಯ ಆರೋಗ್ಯ ಸಹಾಯಕ ಮಹಾಂತೇಶ ಅವರು ಮಾತನಾಡಿ ಎರಡು ವಾರದ ಕೆಮ್ಮು ಕೆಮ್ಮಿದಾಗ ಕಫದಲ್ಲಿ ರಕ್ತ ಉಸಿರಾಡಲು ತೊಂದರೆ ಅಧಿಕವಾದ ಜ್ವರ ಹಾಗೂ ಹಸಿವಾಗದಿರುವುದು ದೇಹದ ತೂಕ ಇಳಿಕೆ ಆಗುವುದು ಇವುಗಳು ಲಕ್ಷಣವಾಗಿರುತ್ತದೆ ಅಂತವರು ಕೂಡಲೇ ಆಸ್ಪತ್ರೆಗೆ ಭೇಟಿ ಕೊಟ್ಟು ತಪಾಸಣೆಗೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು..
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕರು. ಆಶಾ ಕಾರ್ಯಕರ್ತರು. ಅಂಗನವಾಡಿ ಕಾರ್ಯಕರ್ತೆಯರು. ಹಾಗೂ ಸಾರ್ವಜನಿಕರು ಹಾಜರಿದ್ದರು.