ಉದಯವಾಹಿನಿ :
ಕವಿತಾಳ :-
ಮಕ್ಕಳು ಭವಿಷ್ಯದ ವಿಜ್ಞಾನಿಗಳು ಅವರಲ್ಲಿ ವೈಜ್ಞಾನಿಕ ಚಿಂತನೆ ಕ್ರಿಯಾ ಶೀಲತೆ ಸೃಜನಶೀಲತೆ ಮನೋಭಾವವನ್ನು ಬೆಳೆಸುವ ಅಗತ್ಯವಿದೆ ಎಂದು ಮುಖ್ಯ ಗುರುಗಳಾದ ಶಾಂತ ಮೇಟಿ ಹೇಳಿದರು.
ಪಟ್ಟಣದ ಸಮೀಪದ ಅಮೀನಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಮತ್ತು ಚಿತ್ರ ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಅವರು ಮಕ್ಕಳಲ್ಲಿ ಓದುವ ಹವ್ಯಾಸ ಜ್ಞಾರ್ನಾಜನೆ ಹೆಚ್ಚಿಸಿಕೊಳ್ಳಲು ವಸ್ತು ಶಿಸ್ತು ಮತ್ತು ಸಮಯ ಪಾಲನೆಯ ಬಗ್ಗೆ ಅರಿವು ಮೂಡಿಸಿದರೆ ಅವರು ಶೈಕ್ಷಣಿಕವಾಗಿ ಯಶಸ್ವಿಯಾಗಿ ಅವರಲ್ಲಿರುವ ಪ್ರತಿಭೆ ಅರಳಲಿಕ್ಕೆ ನೆರವಾಗಲಿದೆ ಎಂದು ಹೇಳಿದರು
ನಂತರ ಶಿಕ್ಷಕರಾದ ಬಸವನಗೌಡ ಮಾತನಾಡಿ ವಿಜ್ಞಾನ ಪ್ರಯೋಗಾಲಯ ದಲ್ಲಿರುವ ಉಪಕರಣಗಳನ್ನು ಬಳಸುವುದರಿಂದ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ಆಸಕ್ತಿ ಹೆಚ್ಚಾಗಿ ಕಲಿಕೆಗೆ ಪ್ರೇರಣೆಯಾಗುವುದರ ಜೊತೆಗೆ ಓದುವ ಹವ್ಯಾಸ ಬೆಳೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಮಹಿಬೂಬ್. ಚಂದ್ರಪ್ಪ ಶಿವಪುತ್ರ ಸ್ವಾಮಿ ರಾಜಶ್ರೀ ಮಂಜುಳಾ ಸುಮಿತ್ರ ಸರೋಜಾ ಮತ್ತು ಮಕ್ಕಳು ಭಾಗವಹಿಸಿದ್ದರು