Thursday , September 19 2024
Breaking News
Home / Breaking News / ಕವಿತಾಳ – ಕ್ಷಯ ರೋಗದ ಜನಜಾಗೃತಿ

ಕವಿತಾಳ – ಕ್ಷಯ ರೋಗದ ಜನಜಾಗೃತಿ


ಉದಯ ವಾಹಿನಿ :
ಕವಿತಾಳ :
ಜಿಲ್ಲಾಡಳಿತ ಜಿಲ್ಲಾ ಪಂಚಾಯತ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಹ ಜಿಲ್ಲಾ ಕ್ಷಯರೋಗ ವಿಭಾಗ. ಕ್ಷಯರೋಗ ಘಟಕ ಸಿರವಾರ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕವಿತಾಳ. ಮುಖಾಮುಖಿ ರಂಗ ಸಂಸ್ಥೆ ರಾಯಚೂರು. ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಶ್ರೀ ಶಿವಪ್ಪ ತಾತನವರ ಮಠದಲ್ಲಿ ಜಾನಪದ ಕಲಾ ತಂಡದವರಿಂದ ಬೀದಿ ನಾಟಕದ ಮೂಲಕ ಜನತೆಗೆ ಕ್ಷಯರೋಗ ಕುರಿತು ಜಾಗೃತಿ ಮೂಡಿಸಲಾಯಿತು..
ಈ ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಕೇಂದ್ರ ಕವಿತಾಳದ ಆಡಳಿತ ವೈದ್ಯಾಧಿಕಾರಿಗಳಾದ ಶ್ರೀ ಅಮೃತ ರಾಥೋಡ್ ಅವರು ತಮಟೆ ಬಾರಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
2025ರ ಒಳಗೆ ಕ್ಷಯರೋಗ ಮುಕ್ತ ಭಾರತ ಮಾಡುವುದು ಇಲಾಖೆಯ ಹಾಗೂ ಸರಕಾರದ ಉದ್ದೇಶವಾಗಿದೆ ಅದಕ್ಕಾಗಿ ಕ್ಷಯರೋಗಿಗಳನ್ನು ಬೇಗನೆ ಪತ್ತೆ ಹಚ್ಚಿ ಬೇಗನೆ ಚಿಕಿತ್ಸೆಗೆ ಒಳಪಡಿಸುವುದು ಹಾಗೂ ಸಂಪೂರ್ಣವಾಗಿ ಗುಣಮುಖರಾಗಿ ಮಾಡುವ ಉದ್ದೇಶವಾಗಿದೆ ಎಂದು ಹೇಳಿದರು

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿ ಎರಡು ವಾರದ ಕೆಮ್ಮು ಕೆಮ್ಮಿದಾಗ ಕಫದಲ್ಲಿ ರಕ್ತ ಉಸಿರಾಡಲು ತೊಂದರೆ ಅಧಿಕವಾದ ಜ್ವರ ಹಾಗೂ ಹಸಿವಾಗದಿರುವುದು ದೇಹದ ತೂಕ ಇಳಿಕೆ ಆಗುವುದು ಇವುಗಳು ಲಕ್ಷಣವಾಗಿರುತ್ತದೆ ಅಂತವರು ಕೂಡಲೇ ಆಸ್ಪತ್ರೆಗೆ ಭೇಟಿ ಕೊಟ್ಟು ತಪಾಸಣೆಗೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು..
ನಂತರ ತಾಲೂಕ ಕ್ಷಯರೋಗ ಮೇಲ್ವಿಚಾರಕ ಶ್ರೀ ಪ್ರೇಮಪ್ರಸಾದ್ ಇವರು ಮಾತನಾಡಿ ಕ್ಷಯರೋಗದಲ್ಲಿ ಎರಡು ವಿಧ ಶ್ವಾಸಕೋಶದ ಕ್ಷಯ ಹಾಗೂ ಶ್ವಾಸಕೋಶತೇಹರ ಕ್ಷಯರೋಗದ ಲಕ್ಷಣ ಇರುವವರು ಕೂಡಲೇ ಚಿಕಿತ್ಸೆ ಪಡೆಯಬೇಕೆಂದರು ಕ್ಷಯರೋಗಕ್ಕೆ ಸಂಪೂರ್ಣ ಚಿಕಿತ್ಸೆ ಇರುತ್ತದೆ ಎಂದು ತಿಳಿಸಿದರು
ನಂತರ ಕಲಾ ತಂಡದ ಮುಖ್ಯಸ್ಥರಾದ ಶ್ರೀಮತಿ ನಿರ್ಮಲಾ ವೇಣುಗೋಪಾಲ್ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಆಪ್ತ ಸಮಾಲೋಚಕರಾದ ವಿಶ್ವನಾಥ ಕಿರಿಯ ಆರೋಗ್ಯ ಸಹಾಯಕ ಪ್ರದೀಪ್ ‌.ಅಂಜನಮ್ಮ ಕಿರಿಯ ಆರೋಗ್ಯ ಸಹಾಯಕಿ ಆಶಾ ಕಾರ್ಯಕರ್ತರು ಹಾಗೂ ಹರಿಕಥೆ ಮಂಜು ಎಲ್. ಬಸವರಾಜ ಎಲ್‌ .ಕೋಟ್ರಶ್ .ಇಂದ್ರಮ್ಮ ಮಮತಾ ಡಿ.ಸಿ ಕುಮಾರ ಬಾಲಸ್ವಾಮಿ ಸಾರ್ವಜನಿಕರು ಹಾಜರಿದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!