ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅತೀ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿದ್ದಾರೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವಾಯ್ ವಿಜಯೇಂದ್ರ ಹೇಳಿದರು.
ಅವರು ಶನಿವಾರದಂದು ಮಸ್ಕಿ ಗೆ ತೆರಳುವ ಸಂದರ್ಭದಲ್ಲಿ ಇಲ್ಲಿಯ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿದ ನಂತರ ಪಟ್ಟಣದ ವೈಜನಾಥ ದೇವಸ್ಥಾನ ಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ರಾದ ನಳೀನ ಕುಮಾರ್ ಕಟೀಲ್ ಅವರು ನನಗೆ ಮಸ್ಕಿ ಕ್ಷೇತ್ರದ ಉಸ್ತುವಾರಿ ನೀಡಲಾಗಿದ್ದು ಕ್ಷೇತ್ರದ ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್ ಅವರ ತ್ಯಾಗದಿಂದಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಇಂದು ಯಡಿಯೂರಪ್ಪ ನವರು ಮುಖ್ಯ ಮಂತ್ರಿ ಯಾಗಲು ಪ್ರತಾಪಗೌಡ ಪಾಟೀಲ್ ಕಾರಣರಾಗಿದ್ದಾರೆ ಇದರಿಂದಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಜೊತೆಗೆ ಮಸ್ಕಿ ಕ್ಷೇತ್ರದ ಅಭಿವೃದ್ಧಿ ಗಾಗಿ ಮತದಾರರು ಪ್ರತಾಪಗೌಡ ಪಾಟೀಲ್ ರನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ಇದೆ. ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸಲಿದ್ದಾರೆ ಎಂದು ಹೇಳಿದರು.
ಮಿರ್ಚಿ, ಮಂಡಕ್ಕಿ ಸೇವಿಸಿದ ವಿಜಯೇಂದ್ರ:- ದೇವಸ್ಥಾನದಿಂದ ಬರುವ ವೇಳೆ ಇಲ್ಲಿಯ ಶಾಮೀದ್ ಅಲಿ ವೃತ್ತದಲ್ಲಿರುವ ಹೋಟೆಲ್ ಒಂದಕ್ಕೆ ತೆರಳಿ ಬಿಸಿಯಾದ ಮಿರ್ಚಿ ಯನ್ನು ಮುಖಂಡರೊಂದಿಗೆ ಸವಿದರು.
ಈ ಸಂದರ್ಭದಲ್ಲಿ ಕನಕಗಿರಿ ಶಾಸಕ ಬಸವರಾಜ ದಡೇಸೂಗುರ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಜಿಲ್ಲಾ ಪಂಚಾಯತ ಸದಸ್ಯ ಕೆ ಮಹೇಶ್, ಮುಖಂಡರಾದ ನವೀನ ಗುಳಗಣ್ಣವರ, ಅಮರೇಶ ಕುಳಗಿ, ಚಂದ್ರಶೇಖರ್ ನಾಲತವಾಡ, ಮಂಜುನಾಥ ಜೂಲಕುಂಟಿ, ಶಂಭುನಗೌಡ ಪಾಟೀಲ್, ಬಸನಗೌಡ ಓಲಿ, ಮಲ್ಲಪ್ಪ ಬಳೂಟಗಿ, ನಾರಾಯಣ ಸಿಂಗ್ ಹಾನೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಇಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಣಿ ಚೆನ್ನಮ್ಮ ಭಾವಚಿತ್ರ ಕ್ಕೆ ಮಾಲಾರ್ಪಣೆ ಮಾಡಿದರು.