ಉದಯವಾಹಿನಿ :
ಕವಿತಾಳ :
ಎನ್ಆರ್ಬಿಸಿ 5ಎ ಕಾಲುವೆ ನೀರಾವರಿಗೆ ಒತ್ತಾಯಿಸಿ ಪಾಮನಕಲ್ಲೂರು ಬಸ್ ನಿಲ್ದಾಣ ಮುಂದೆ ನೆಡೆಯುತ್ತಿರುವ ನೀರಾವರಿ ಹೋರಾಟ ಸಂಯುಕ್ತ ವೇದಿಕೆ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಬಿಜೆಪಿ ಅಭ್ಯಾರ್ಥಿ ಪ್ರತಾಪಗೌಡ ಪಾಟೀಲ ಪರ ಮತ ಕೇಳುವ ನೈತಿಕತೆ ಇಲ್ಲಾ ಎಂದು ಆರ್ ಮಾನಯ್ಯ ಹೇಳಿದರು.
11 ದಿನಗಳ ಹಿಂದೆ ಮಂಡಿಸಿರುವ ಬಜೆಟ್ ನಲ್ಲಿ ಜಿಲ್ಲೆಯ ಎಲ್ಲಾ ಯೋಜನೆಗೆ ಅದರಲ್ಲಿ 5ಎ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರದಿಂದ – ಬಿಜೆಪಿ ಮುಖಂಡರಿಂದ ದೊಡ್ಡ ದ್ರೋಹವಾಗಿದೆ.5ಎ ನೀರಾವರಿಯಿಂದ 107 ಗ್ರಾಮಗಳ 1ಲಕ್ಷ 77ಸಾವಿರ ಎಕರೆರ ರೈತರ ಜಮೀನಿಗೆ ನೀರು ಬರುವ ಅತ್ಯಂತ ಮಹತ್ವದ ನೀರಾವರಿ ಯೋಜನೆಗೆ ಬಿಡಿಗಾಸು ನೀಡದೆ ನಮ್ಮ ಭಾಗದ ರೈತರ ಬದುಕಿನ ಜೊತೆ ಬಿಜೆಪಿ ಸರಕಾರ ಮತ್ತು ದಶಕದ ಅಭ್ಯರ್ಥಿ ಪ್ರತಾಪಗೌಡ ಚಲ್ಲಾಟವಾಡುತ್ತಿದ್ದಾರೆ.
ಇವರು ಕೊಟ್ಟ ಭರವಸೆಗಳು ಒಂದು ಕಡೆ ಸುಳ್ಳಾದರೆ ಮತ್ತೊಂದು ಕಡೆ ರೈತರು ಈ ಮಹತ್ವದ ಬೇಡಿಕೆಯನ್ನು ಅಲ್ಲೆಗಳಿಯುವುದುಕ್ಕಾಗಿಯೇ ವಟಗಲ್ ಬಸವಣ್ಣ ಏತನೀರಾವರಿ,ನಂದವಾಡಗಿ ಹನಿ ನೀರಾವರಿಗಳ ನಾಟಕ ನೆಡಸಲಾಗಿದೆ.ಇದು ರಾಜ್ಯ ಸರ್ಕಾರದ ಅತ್ಯಂತ ನಾಚಿಕೆಗೇಡಿನ ಸಂಗತಿಎಂದು 5ಎ ನೀರಾವರಿ ಹೋರಾಟ ಸಂಯುಕ್ತ ವೇದಿಕೆ ಈ ಮೂಲಕ ಪ್ರಕಟಿಸುತ್ತಿದೆ.
ಹಾಗಯೇ ಇತ್ತೀಚೆಗೆ ಇನ್ನೊಂದು ಕಪಟ ನಾಟಕಕ್ಕೆ ಸಾಕ್ಷಿಯಾಗಿದೆ. ಸಣ್ಣ ನೀರಾವರಿ ಸಚಿವ ಮದುಸ್ವಾಮಿಯವರು ಮಸ್ಕಿಗೆ ಬಂದು ಮಸ್ಕಿ ತಾಲೂಕಿಗೆ ಕೆರೆ ತುಂಬಿಸಲು 475ಕೋಟಿ ರೂ.ಮೀಸಲಿರಿದ್ದಾಗಿ ಘೋಷಿಸಿ ಹೋಗಿದ್ದಾರೆ! ಹಾಗಯೇ ಪ್ರತಾಪಗೌಡ ಪಾಟೀಲ ಈಗಾಗಲೇ 82 ಕೋಟಿ ಬಿಡುಗಡೆಯಾಗಿದೆ ಎಂದು ಮಾದ್ಯಮದ ಮುಂದೆ ಹೇಳಿದ್ದಾರೆ. ಇಡಿ ತಾಲೂಕಿನ ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ ಗೆ ಸೇರಿದ ಒಟ್ಟು ಕೆರೆಗಳ ಸಂಖ್ಯೆ 14 ಆಗಿದೆ. ಇವುಗಳು ಸಂಗ್ರಹ ಸಾಮರ್ಥ್ಯ ವು 0.232ಟಿ ಎಂ ಸಿ ಆಗಿದೆ ಕಾಲು ಟಿಎಂಸಿ ನೀರು ಸಂಗ್ರಹಿಸಲು475 ಕೋಟಿ ಹಣ ಖರ್ಚು ಮಾಡುವ ಯೋಜನೆಯ ಯಾರಿಗೆ ಬೇಕಾಗಿದೆ? ಇದರ ಹಿಂದೆ ಯಾರ ಹಿತ ಅಡಗಿದೆ ? ಕೆರೆ ತುಂಬಿಸುವ ಉದ್ದೇಶವೋ?ಅಥವಾ ಬಿಜೆಪಿ ಮುಖಂಡರ ಖಜಾನೆ ತುಂಬಿಸುವ ಉದ್ದೇಶ ವೋ? ಇದೆ ಹಣದಲ್ಲಿ 5ಎ ಕಾಲುವೆ ಕಾಮಗಾರಿಯನ್ನು ಆರಂಭಿಸುವಂತೆ ವೇದಿಕೆ ಕೃಷ್ಣ ಭಾಗ್ಯ ಜಲನಿಗಮವನ್ನು ಒತ್ತಾಯಿಸುತ್ತದೆ. ಒಟ್ಟಾರೆ ಗ್ರಾಮ ಪಂಚಾಯತ್ ಹಾಗೂ ಮುಂಬರುವ ಮಸ್ಕಿ ವಿಧಾನ ಸಭಾ ಉಪಚುನಾವಣೆಯಲ್ಲಿ 5ಎ ನೀರಾವರಿ ಯೋಜನೆಯ ವಿರೋಧಿಗಳನ್ನು ಮತ್ತು ಪ್ರತಾಪಗೌಡ ಪಾಟೀಲರನ್ನು ಸೋಲಿಸುವಂತೆ ಈ ಮೂಲಕ ಕರೆ ನೀಡುತ್ತದೆ.
ಬಸವರಾಜ ವಟಗಲ ಸಂಚಾಲಕರು, ಮೌನೇಶ ದೊಡ್ಡ ಮನಿ