ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ತಾಲೂಕಿನ ಹಟ್ಟಿ ಪಟ್ಟಣದ
ಹಟ್ಟಿಚಿನ್ನದಗಣಿಯ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿ ಓರ್ವರಿಗೆ ಕೊರೋನಾ ಪಾಸಿಟಿವ್ ಧೃಡ
ಪಟ್ಟಿದೆ ಎಂದು ಹಟ್ಟಿಚಿನ್ನದ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ತರಗತಿಗೆ ಹಾಜರಾಗಲು ಸರಕಾರದ ಸೂಚನೆಯಂತೆ ಕರೋನ ಪರೀಕ್ಷೆ ಕಡ್ಡಾಯವಾಗಿದ್ದ ಕಾರಣ ವಿದ್ಯಾರ್ಥಿ ಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆಗೆ ಗಂಟಲದ್ರವ ನೀಡಿದ್ದ ನಿನ್ನೆ ವರದಿ ಪಾಸಿಟಿವ್ ಬಂದಿದ್ದು ವಿದ್ಯಾರ್ಥಿಯ
ಸ್ವ ಗ್ರಾಮವಾದ ಹಾಲಭಾವಿ ತಾಂಡದಲ್ಲಿರುವ ಮನೆಯಲ್ಲಿ ಹೋಮ್ ಐಸೋಲೇಶನ್ ಮಾಡಲಾಗಿದ್ದು ವಿದ್ಯಾರ್ಥಿ ಕುಟುಂಬಸ್ಥರ ಗಂಟಲ ದ್ರವವನ್ನ ಪರೀಕ್ಷೆಗಾಗಿ ಕಳುಹಿಸಲಾಗಿದೆ.ಹಾಗೂ ವಸತಿ ನಿಲಯದ ವಿದ್ಯಾರ್ಥಿ ಹಾಗೂ ಸಿಬ್ಬಂದಿ ಸೇರಿ 30 ಜನರ ಗಂಟಲ ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ.