ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ ಪಟ್ಟಣದ ಸೂರ್ಯವಂಶ ಕ್ಷತ್ರೀಯ ಕಲಾಲ್ ಕಾಟಿಕ್ ಸಮಾಜದ ವತಿಯಿಂದ ಶುಕ್ರವಾರದಂದು ಎಸ್.ಸಿ. ಮೀಸಲಾತಿಗೆ ಒತ್ತಾಯಿಸಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಇಲ್ಲಿಯ ನರಹರಿ ದೇವಸ್ಥಾನದಿಂದ ಸಮಾಜದ ಬಾಂಧವರೆಲ್ಲ ಸೇರಿ ಜಾಥಾ ದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಉಪ ತಹಶಿಲ್ದಾರರ ಕಚೇರಿಗೆ ತೆರಳಿ ಉಪ ತಹಶಿಲ್ದಾರರಾದ ಮಂಜುಳಾ ಪತ್ತಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಚಿದಾನಂದ ಕಾಂಬಳೇಕರ್ ಮಾತನಾಡಿ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಸಮಾಜಕ್ಕೆ ಎಸ್ ಸಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ನರಹರಿ ಚಂದುಕರ, ಹೋಬಳಿ ಅಧ್ಯಕ್ಷ ರಾದ ಅಶೋಕ ಮೋತಿಕರ, ರಾಜ್ಯ ಯುವ ಸಂಚಾಲಕ ಪ್ರವೀಣಜಿ, ಜಿಲ್ಲಾ ಪದಾಧಿಕಾರಿಗಳಾದ ಕನೊಲಪ್ಪ, ಶಾಮರಾಜ ಮಟ್ಟೇಕರ, ಸಂಗಮೇಶ, ಶಾಮರಾಜ ಮೋತಿಕರ, ಮಲ್ಲಿಕಾರ್ಜುನ ಅಂಕುಶಕರ್ ಸೇರಿದಂತೆ ಕೊಪ್ಪಳ, ಕುಷ್ಟಗಿ ದೋಟಿಹಾಳ,ಮೇಣೆದಾಳ, ಹಿರೇಮನ್ನಾಪುರ, ಭಾಗ್ಯನಗರ ಹಾಗೂ ತಾವರಗೇರಿಯ ಕಲಾಲ ಸಮುದಾಯದ ಸಮಸ್ತ ಬಾಂಧವರು, ಮಹಿಳೆಯರು ಪಾಲ್ಗೊಂಡಿದ್ದರು.