ವರದಿ – ಆನಂದ ಸಿಂಗ್ ರಜಪೂತ
ಉದಯವಾಹಿನಿ :
ಕವಿತಾಳ : ಕೋವಿಡ್ 19 ಅಲೆ ಪ್ರಾರಂಭವಾಗಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸ ಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ ಅಮೃತ ರಾಠೋಡ್ ಹೇಳಿದರು
ಪಟ್ಟಣದ ಸಿ ಆರ್ ಸಿ ಕಟ್ಟಡದಲ್ಲಿ
ಜಿಲ್ಲಾ ಪಂಚಾಯಿತಿ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಸಮುದಾಯ ಆರೋಗ್ಯ ಕೇಂದ್ರ ಕವಿತಾಳ ಹಾಗೂ ಪಟ್ಟಣ ಪಂಚಾಯತ ಕವಿತಾಳ ಇವರು ಸಂಯುಕ್ತ ಆಶ್ರಯದಲ್ಲಿ. ಕೋವಿಡ್ 19 ಲಸಿಕಾ ಕಾರ್ಯಕ್ರಮದ ಜಾಗೃತಿ ಮೂಡಿಸುವ ಸಭೆಯಲ್ಲಿ ಅವರು ಮಾತನಾಡಿದರು.
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ 45 ರಿಂದ 50 ವರ್ಷ ಮೇಲ್ಪಟ್ಟುವರು ಹಾಗೂ ಸಕ್ಕರೆ ಕಾಯಿಲೆ ರಕ್ತದೊತ್ತಡ ಹೃದಯದ ಕಾಯಿಲೆಗಳು ಹಾಗೂ ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಪಡೆಯಬೇಕು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತನಾಡಿ ಹಿರಿಯ ನಾಗರಿಕರು ತಪ್ಪದೇ ಕೋವಿಡ್ 19 ಲಸಿಕೆಯನ್ನು ಪಡೆಯುವ ಬೇಕು ಇದರಿಂದ ಕರೋನಾದಿಂದ ದೂರವಿರಬಹುದು ಪ್ರತಿಯೊಬ್ಬ ಸಾರ್ವಜನಿಕರು ತಮ್ಮ ಆಧಾರ್ ಕಾರ್ಡನ್ನು ತೆಗೆದುಕೊಂಡು ಬಂದು ನೊಂದಾವಣೆ ಮಾಡಿಸಿಕೊಂಡು ಲಸಿಕೆಯನ್ನು ತಪ್ಪದೇ ಪಡೆದುಕೊಳ್ಳಬೇಕೆಂದು ಹಾಗೂ ವಾರದಲ್ಲಿ ನಾಲ್ಕು ಬಾರಿ ಶನಿವಾರ ಮತ್ತು ಭಾನುವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಲಸಿಕೆಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಆಶಾ ಕಾರ್ಯಕರ್ತೆಯರು ಪಟ್ಟಣದಲ್ಲಿ ಹಿರಿಯ ನಾಗರಿಕರನ್ನು ಮನೆ ಮನೆ ಭೇಟಿ ನೀಡಿ ಲಸಿಕೆಯ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಫಲಾನುಭವಿಗಳನ್ನು ಲಸಿಕಾ ಕಾರ್ಯಕ್ರಮಕ್ಕೆ ಕರೆ ತರಬೇತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ. ಕಿರಿಯ ಆರೋಗ್ಯ ಸಹಾಯಕ ಪ್ರದೀಪ ಕುಮಾರ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ಮತ್ತು ಅದು ಪಟ್ಟಣದ ಹಿರಿಯ ನಾಗರಿಕರು ಫಲಾನುಭವಿಗಳಾದರು ಹಾಜರಿದ್ದರು.